#MeToo ಅಭಿಯಾನವೀಗ ಕನ್ನಡ ಚಿತ್ರರಂಗದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ನಡುವೆಯೂ ಹಲವಾರು ನಟ ನಟಿಯರು ಇದರ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಉದ್ಘರ್ಷ ಚಿತ್ರದ ಮೂಲಕ ಕನ್ನಡಕ್ಕೆ ಬಂದಿರೋ ತಮಿಳು ಹುಡುಗಿ ಧನ್ಸಿಕಾ ಮಿ ಟೂ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಮಿ ಟೂ ಎಂಬುದು ಮಹಿಳೆಯರ ಆತ್ಮಗೌರವ ಕಾಪಾಡಿಕೊಳ್ಳಲಾಗಿಯೇ ಹುಟ್ಟಿಕೊಂಡಿರೋ ಅಭಿಯಾನ. ಜನ್ಮ ನೀಡೋ ಹೆಣ್ಣನ್ನು ಗೌರವಿಸೋದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಹುಟ್ಟಿಕೊಂಡಿರೋ ಮಿ ಟೂ ಅಭಿಯಾನ ಒಳ್ಳೆಯ ಉದ್ದೇಶ ಹೊಂದಿದೆ. ಲೈಂಗಿಕ ಕಿರುಕುಳ ಅನುಭವಿಸಿದ ಹೆಣ್ಣುಮಕ್ಕಳೆಲ್ಲ ಈ ಮೂಲಕ ತಮ್ಮ ಯಾತನೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಅಂತ ಧನ್ಸಿಕಾ ಹೇಳಿಕೊಂಡಿದ್ದಾರೆ.
ಧನ್ಸಿಕಾ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರೋ ನಟಿ. ಈಕೆ ಕಬಾಲಿ ಚಿತ್ರದಲ್ಲಿ ರಜನೀಕಾಂತ್ ಅವರ ಪುತ್ರಿಯಾಗಿಯೂ ಅಭಿನಯಿಸಿದ್ದರು. ಇದೀಗ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರದ ಮೂಲಕ ಕನ್ನಡದಲ್ಲಿಯೂ ಅಭಿನಯಿಸುತ್ತಿದ್ದಾರೆ. ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರದ ಪಾತ್ರದ ಮೂಲಕ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶದ ನಿರೀಕ್ಷೆಯನ್ನೂ ಹೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv