ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮುದ್ದು ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರೇಕ್‌ನ ಬಳಿಕ ಮತ್ತೆ ನಟಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ರೆಡ್ ಡ್ರೆಸ್‌ನಲ್ಲಿ ದೀಪಿಕಾ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಮಗುವಿನ ತಾಯಿ ಆದ್ಮೇಲೆಯೂ ದೀಪಿಕಾ ಫಿಟ್‌ನೆಸ್ ಕಡೆ ಹೆಚ್ಚು ಗಮನ ವಹಸುತ್ತಿದ್ದಾರೆ. ಬ್ಯೂಟಿ, ಫಿಟ್‌ನೆಸ್, ವರ್ಕೌಟ್ ಅಂತ ಮಗುವಿನ ಪಾಲನೆಯೊಂದಿಗೆ ಮಾಡುತ್ತಿದ್ದಾರೆ. ಇದರ ನಡುವೆ ನಟಿಯ ಸ್ಟೈಲೀಶ್ ಫೋಟೋಶೂಟ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:ಯಶಸ್ಸಿಗಾಗಿ ‘ವಿಲನ್’ ಆದ ‘ಬಿಗ್ ಬಾಸ್’ ಶೈನ್ ಶೆಟ್ಟಿ
ಇದೀಗ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಲು ನಟಿ ಸಜ್ಜಾಗಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪವರ್‌ಫುಲ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಶಾರುಖ್ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ.
‘ಸ್ಪಿರಿಟ್’ ಸಿನಿಮಾ (Spirit) ದೀಪಿಕಾ ಕೈತಪ್ಪಿದ್ರೂ ಕೂಡ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ‘ಕಲ್ಕಿ 2878 ಎಡಿ’ ಸಿನಿಮಾದ ಪಾರ್ಟ್ 2ನಲ್ಲಿ ನಟಿಸಲಿದ್ದಾರಂತೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ ಎನ್ನಲಾಗಿದೆ. ಇದರೊಂದಿಗೆ ದಕ್ಷಿಣದ ಸಿನಿಮಾದಲ್ಲಿ ನಟಿಸಲು ಅವರಿಗೆ ಅವಕಾಶ ಅರಸಿ ಬರುತ್ತಿವೆ.