ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Paukone) ಸದ್ಯ ‘ಕಲ್ಕಿ 2898 ಎಡಿ’ (Kali 2898 AD) ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಿಗಿಸಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚೆಗೆ ‘ಕಲ್ಕಿ’ ಚಿತ್ರದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ದುಬಾರಿ ಮೊತ್ತದ ಡ್ರೆಸ್ ಧರಿಸಿ ಬಂದಿದ್ದಾರೆ. ನಟಿಯ ಡ್ರೆಸ್ ರೇಟ್ ಕೇಳಿಯೇ ಫ್ಯಾನ್ಸ್ ದಂಗಾಗಿದ್ದಾರೆ.
ಅಂದಹಾಗೆ ‘ಕಲ್ಕಿ’ ಚಿತ್ರದ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಪ್ರಭಾಸ್ (Prabhas) ಸಹಾಯ ಮಾಡಿದ್ದಾರೆ. ಅದಕ್ಕೆ, ಅಮಿತಾಭ್ ಬಚ್ಚನ್ (Amithab Bachchan) ಕಾಲೆಳೆದಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.
ಸಿನಿಮಾ ಕುರಿತು ಈವೆಂಟ್‌ನಲ್ಲಿ ಮಾತಾಡಿ, ಬರುತ್ತಿದ್ದಂತೆ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಮುಂದಾದಾಗ, ಪ್ರಭಾಸ್ ಮತ್ತು ಅಮಿತಾಭ್ ಇಬ್ಬರೂ ನಟಿಯ ಸಹಾಯಕ್ಕೆ ಧಾವಿಸಿದರು. ಪ್ರಭಾಸ್ ಅವರು ದೀಪಿಕಾ ಅವರ ಕೈ ಹಿಡಿದು ಆರಾಮವಾಗಿ ವೇದಿಕೆಯಿಂದ ಕೆಳಗೆ ಇಳಿಯಲು ಸಹಾಯ ಮಾಡಿದರು. ಬಿಗ್ ಬಿ ಅವರು ಪ್ರಭಾಸ್ ಹಿಂದೆ ನಿಂತು ತಮಾಷೆ ಮಾಡಿದರು.
View this post on Instagram
ಈ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ‘ಕಲ್ಕಿ’ ಪ್ರೀ ರಿಲೀಸ್ ಈವೆಂಟ್‌ಗಾಗಿ 10 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ.
ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಮೊದಲ ಬಾರಿಗೆ ದೀಪಿಕಾ, ಈ ಚಿತ್ರಕ್ಕಾಗಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ.