ಕನ್ನಡತಿ, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಮಗುವಿನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಯಾವುದೇ ಹೊಸ ಸಿನಿಮಾಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಇದೀಗ ದೀಪಿಕಾ ಜೊತೆ ಕೆಲಸ ಮಾಡುವುದು ಸುಲಭ ಎಂದು ನಟ ಇಮ್ತಿಯಾಜ್ ಅಲಿ (Imtiaz Ali) ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಮಗನ ಲೇಟೆಸ್ಟ್ ಫೋಟೋ ಶೇರ್ ಮಾಡಿದ ‘ಹೆಬ್ಬುಲಿ’ ನಟಿ
ಇಮ್ತಿಯಾಜ್ ಅಲಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ದೀಪಿಕಾ ಅದ್ಭುತ ನಟಿ. ಅವರೊಂದಿಗೆ ಕೆಲಸ ಮಾಡುವುದು ಸುಲಭ ಎಂದಿದ್ದಾರೆ. ಸಹನಟಗಿಂತ ಮೊದಲೇ ಅವರು ಕ್ಯಾಮೆರಾ ಮುಂದೆ ಬರಲು ಸದಾ ಸಿದ್ಧರಾಗಿರುತ್ತಾರೆ. ಜೊತೆಗೆ ಸ್ಕ್ರೀಪ್ಟ್ ಇಲ್ಲದೇ ಸರಳವಾದ ಶಾಟ್‌ಗಳಿಗೂ ನಟಿಸಲು ರೆಡಿಯಾಗಿರುತ್ತಾರೆ ಎಂದು ನಟಿಯ ವೃತ್ತಿಪರತೆ ಮತ್ತು ಶ್ರದ್ಧೆಯ ಬಗ್ಗೆ ಮಾತನಾಡಿದ್ದಾರೆ.
ಅಂದಹಾಗೆ, ದೀಪಿಕಾ ಜೊತೆ ಲವ್ ಆಜ್ ಕಲ್, ಕಾಕ್‌ಟೈಲ್, ತಮಾಷಾ ಸಿನಿಮಾಗಳಲ್ಲಿ ಇಮ್ತಿಯಾಜ್ ನಟಿಸಿದ್ದಾರೆ.