ಬಾಲಿವುಡ್ ಸ್ಟಾರ್ ದಂಪತಿ ರಣ್ವೀರ್ ಸಿಂಗ್- ದೀಪಿಕಾ ಪಡುಕೋಣೆ (Deepika Padukone) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದೀಪ್ವೀರ್ ದಂಪತಿ ಮೊದಲ ಮಗುವಿನ (Child) ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ದೀಪಿಕಾ ಪಡುಕೋಣೆ. ಪ್ರಗ್ನೆನ್ಸಿ (Pregnancy) ಖಚಿತ ಪಡಿಸಿ, ಸೆಪ್ಟಂಬರ್ ನಲ್ಲಿ ಮಗುವಿನ ಆಗಮನ ಎಂದು ಬರೆದುಕೊಂಡಿದ್ದಾರೆ.
Advertisement
ವರುಣ್ ಧವನ್ ದಂಪತಿ, ಅನುಷ್ಕಾ- ವಿರಾಟ್ ಜೋಡಿ ಸಿಹಿಸುದ್ದಿ ಕೊಡ್ತಿದ್ದಂತೆ ದೀಪಿಕಾ ಮತ್ತು ರಣ್ವೀರ್ (Ranveer Singh) ಜೋಡಿ ಮನೆಗೆ ಮೊದಲ ಅತಿಥಿ ಆಗಮನ ಆಗುತ್ತಿರುವ ಸಂತಸದಲ್ಲಿದ್ದಾರೆ. ದೀಪಿಕಾ ಈಗ 2 ತಿಂಗಳ ಗರ್ಭಿಣಿ ಎನ್ನಲಾಗಿದೆ. ಅಷ್ಟಕ್ಕೂ ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ದೀಪಿಕಾ ಕುಟುಂಬ ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿರಲಿಲ್ಲ. ಅಧಿಕೃತವಾಗಿ ಇಂದು ಅನೌನ್ಸ್ ಮಾಡಿದ್ದಾರೆ.
Advertisement
Advertisement
‘ದಿ ವೈಟ್ ಲೋಟಸ್ ಸೀಸನ್ 3’ ಕಾರ್ಯಕ್ರಮಕ್ಕೆ ದೀಪಿಕಾ ಭಾಗಯಾಗಬೇಕಿತ್ತು. ಸಡನ್ ಆಗಿ ಕಾರ್ಯಕ್ರಮಕ್ಕೆ ಬರದೇ ಹೊರಗುಳಿದಿದ್ದರು. ಪ್ರೆಗ್ನೆನ್ಸಿ ಕಾರಣದಿಂದಲೇ ಕಾರ್ಯಕ್ರಮಕ್ಕೆ ನಟಿ ಗೈರಾಗಿದ್ದಾರೆ ಎನ್ನಲಾಗುತ್ತಿತ್ತು. ಅದು ಈಗ ನಿಜವಾಗಿದೆ. ಇದೇ ಕಾರಣದಿಂದಾಗಿ ಅವರು ಕಾರ್ಯಕ್ರಮದಿಂದ ದೂರ ಉಳಿದಿದ್ದರು.
Advertisement
2018ರಲ್ಲಿ ರಣ್ವೀರ್, ದೀಪಿಕಾ ಜೋಡಿ ಮದುವೆಯಾದರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಮದುವೆಯಾದರು. ದೀಪಿಕಾ ಪಡುಕೋಣೆ ಅವರು ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್ಗೆ (Bollywood) ಲಗ್ಗೆ ಇಟ್ಟರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ನಂತರ ಹಿಂದಿ ಸಿನಿಮಾರಂಗ ಬೆಂಗಳೂರು ಬೆಡಗಿಯ ಕೈಹಿಡಿಯಿತು. ಇತ್ತೀಚಿನ ‘ಪಠಾಣ್’ ಚಿತ್ರದ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ.