ತಾಯ್ತನದ ಖುಷಿಯಲ್ಲಿದ್ದ ದೀಪಿಕಾ ಪಡುಕೋಣೆ (Deepika Padukone) ಸಿನಿಮಾ ರೀ ಎಂಟ್ರಿಗೆ ಭರ್ಜರಿ ಸಿದ್ಧತೆ ನಡೆದಿದೆ. ಪ್ರಭಾಸ್ (Prabhas) ಸಿನಿಮಾದಲ್ಲಿ ನಟಿಸಲು 20 ಕೋಟಿ ರೂ. ಸಂಭಾವನೆ ದೀಪಿಕಾ ಪಾಲಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಧಿಕ ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಕನ್ನಡತಿ ದಿಶಾ ಮದನ್‌ಗೆ ಕಾನ್ ಫಿಲ್ಮ್ ಫೆಸ್ಟಿವಲ್ ಆಹ್ವಾನ

ಶಾರುಖ್ ಖಾನ್ ನಟನೆಯ ‘ಕಿಂಗ್’ (King) ಚಿತ್ರದಲ್ಲಿಯೂ ದೀಪಿಕಾ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾ ನಂತರ ‘ಸ್ಪಿರಿಟ್’ ತಂಡಕ್ಕೆ ನಟಿ ಸೇರಿಕೊಳ್ಳಲಿದ್ದಾರೆ. 2027ರಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.
ಕಳೆದ ವರ್ಷ ಸೆ.8ರಂದು ಮುದ್ದಾದ ಹೆಣ್ಣುಮಗುವಿಗೆ ನಟಿ ಜನ್ಮ ನೀಡಿದರು. ಈ ಮಗುವಿಗೆ ‘ದುವಾ ಪಡುಕೋಣೆ ಸಿಂಗ್’ (Dua Padukone Singh) ಎಂದು ಹೆಸರಿಟ್ಟಿದ್ದಾರೆ.



