ಬಿಗ್ ಬಾಸ್ (Bigg Boss) ಬೆಡಗಿ ದೀಪಿಕಾ ದಾಸ್ (Deepika Das) ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಮೋಡಿ ಮಾಡುತ್ತಲೇ ಇರುತ್ತಾರೆ. ಇದೀಗ ಚೆಂದದ ಫೋಟೋಶೂಟ್‌ನಿಂದ ನಟಿ ದೀಪಿಕಾ ಕಂಗೊಳಿಸಿದ್ದಾರೆ. ಇದನ್ನೂ ಓದಿ: ಗೌಡ್ರು ಎಂಬ ಕಾರಣಕ್ಕೆ ʻಎಕ್ಸ್‌ಕ್ಯೂಸ್ ಮಿʼ ಸಿನಿಮಾ ಒಪ್ಪಿಕೊಂಡೆ: ರಮ್ಯಾ
ಕಿರುತೆರೆಯ `ನಾಗಿಣಿ’ (Nagini) ಸೀರಿಯಲ್ ಮೂಲಕ ಟಿವಿ ಪ್ರೇಕ್ಷಕರಿಗೆ ಹತ್ತಿರವಾದ ನಟಿ ದೀಪಿಕಾ ದಾಸ್ ಬಳಿಕ ಬಿಗ್ ಬಾಸ್ (Bigg Boss Kannada) ಮನೆಗೆ ಕಾಲಿಟ್ಟರು. ಶೈನ್ ಶೆಟ್ಟಿ ಜೊತೆಗಿನ ಸ್ನೇಹ ವಿಚಾರವಾಗಿ ಸಖತ್ ಹೈಲೈಟ್ ಆಗಿದ್ದ ನಟಿ, ಟಾಪ್ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಇತ್ತೀಚಿನ ಸೀಸನ್ 9 ಬಿಗ್ ಬಾಸ್‌ನಲ್ಲೂ ದೀಪಿಕಾ ದಾಸ್ ಮಿಂಚಿದ್ದರು.
View this post on Instagram
ಇದೀಗ ಪಿಂಕ್ ಬಣ್ಣದ ಡ್ರೆಸ್ ಧರಿಸಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ನಗು ಬೀರಿದ್ದಾರೆ. ಸದ್ಯ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
View this post on Instagram
ಮಹಿಳಾ ಪ್ರಧಾನದ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ.