‘ಬಿಗ್ ಬಾಸ್’ (Bigg Boss Kannda 9) ಖ್ಯಾತಿಯ ದೀಪಿಕಾ ದಾಸ್ (Deepika Das) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಗೂಗಲ್‌ಗೆ ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಗೂಗಲ್‌ನಲ್ಲಿ ವಯಸ್ಸನ್ನು ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ನಟಿ ಲೆಕ್ಕದ ಪಾಠ ಮಾಡಿದ್ದಾರೆ.
ನಾಗಿಣಿ (Nagini), ಬಿಗ್ ಬಾಸ್ ಶೋ ಮೂಲಕ ಸಂಚಲನ ಮೂಡಿಸಿದ್ದ ನಟಿ ದೀಪಿಕಾ ದಾಸ್ ಹುಟ್ಟುಹಬ್ಬದ ದಿನದಂದು ಮಾಡ್ರನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಕೈಯಲ್ಲಿ ಬೊಕ್ಕೆ ಮತ್ತು ಕೇಕ್ ಹಿಡಿದು ಮುದ್ದಿನ ಶ್ವಾನದ ಜೊತೆ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಇದೀಗ ದೀಪಿಕಾ ಪೋಸ್ಟ್‌ನಲ್ಲಿ ಬರೆದಿರುವ ಕ್ಯಾಪ್ಷನ್ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ರಕುಲ್ ದಂಪತಿ
ತಮ್ಮ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿರುವ ಗೂಗಲ್ ಪ್ರಭುಗೆ ದೀಪಿಕಾ ಪಾಠ ಮಾಡಿದ್ದಾರೆ. ಗೂಗಲ್‌ನಲ್ಲಿ ದೀಪಿಕಾ ದಾಸ್ ಬರ್ತ್‌ಡೇಯನ್ನು ಫೆ.23, 1993 ಎಂದು ಹಾಕಿ 31 ವರ್ಷ ಎಂದು ಬರೆಯಲಾಗಿದೆ. ಅದಕ್ಕೆ ನಟಿ, ನನ್ನ ವಯಸ್ಸು 31 ವರ್ಷ ಅಂತ ಹೇಳೋದನ್ನು ನಿಲ್ಲಿಸು. 28 ವರ್ಷ ವಯಸ್ಸಾಗಿದೆ ಅಷ್ಟೇ. ಆದರೂ 82 ವರ್ಷ ಆಗಿರುವಂತೆ ಫೀಲ್ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
View this post on Instagram
ನನ್ನ ಜೀವನದಲ್ಲಿ ಆಗಿರುವ ಎಲ್ಲಾ ವಿಷಯಕ್ಕೂ ಥ್ಯಾಂಕ್ಸ್ ಎಂದು ಹೇಳುತ್ತಾ, ತಮಗೆ ತಾವೇ ಬರ್ತ್‌ಡೇ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತ್‌ಡೇ ಮೈ ಸೆಲ್ಫ್ ಎಂದು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್ ವಿರುದ್ಧ ಮತ್ತೆರಡು ದೂರು ದಾಖಲು
ಇದೀಗ ‘ಪಾಯಲ್’ ಎಂಬ ಸಿನಿಮಾ ಮೂಲಕ ಮಹಿಳಾ ಪ್ರಧಾನ ಸಿನಿಮಾದಲ್ಲಿ ದೀಪಿಕಾ ದಾಸ್ ನಟಿಸುತ್ತಿದ್ದಾರೆ. ಲೀಡ್ ರೋಲ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.