ಕಿರುತೆರೆಯ ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿಯಾಗಿದ್ದ ದಲ್ಜೀತ್ ಕೌರ್ ಇದೀಗ ಎರಡನೇ ಮದುವೆಯಾಗಿದ್ದಾರೆ. ಉದ್ಯಮಿ ನಿಖಿಲ್ ಪಟೇಲ್ ಜೊತೆ ಮಾರ್ಚ್ 18ರಂದು ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ.
ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಸೀಸನ್ 13ರಲ್ಲಿ ನಟಿ ದಲ್ಜೀತ್ ಕೌರ್ (Dalljiet Kaur) ಗಮನ ಸೆಳೆದಿದ್ದರು. ಹಿಂದಿ ನಟ ಶಾಲಿನ್ ಭಾನೋಟ್ ಜೊತೆ 2009ರಲ್ಲಿ ಹಸೆಮಣೆ ಏರಿದ್ದರು. ಬಳಿಕ 2015ರಲ್ಲಿ ಈ ಜೋಡಿ ಡಿವೋರ್ಸ್ ಪಡೆದು ದೂರಾವಾದರು. ಇದನ್ನೂ ಓದಿ: ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಗಾಳಿಪಟ’ ನಟಿ
ಇದೀಗ ಉದ್ಯಮಿ ನಿಖಿಲ್ ಪಟೇಲ್ (Nikhil Patel) ಜೊತೆ ನಟಿ ದಲ್ಜೀತ್ ಕೌರ್ ವೈವಾಹಿಕ (Wedding) ಬದುಕಿಗೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆಯಾಗಿದ್ದು, ಗುರುಹಿರಿಯರ ಸಮ್ಮುಖದಲ್ಲಿ ಮಾರ್ಚ್ 18ರಂದು ಈ ಜೋಡಿ ಮದುವೆಯಾಗಿದ್ದಾರೆ. ಸದ್ಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
View this post on Instagram
ನಿಖಿಲ್‌ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಲ್ಜೀತ್ ಕೌರ್‌ಗೆ ಈಗಾಗಲೇ ಒಬ್ಬ ಮಗನಿದ್ದು, ಪೋಷಕರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.