ಸಖ ಸಖಿ, ಆಕಾಶಗಂಗೆ, ರೌಡಿ ಅಳಿಯ, ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಛಾಯಾ ಸಿಂಗ್ (Chaya Singh) ಇದೀಗ ‘ಅಮೃತಧಾರೆ’ಯಾಗಿ ಟಿವಿ ಪರದೆಗೆ ಮರಳಿದ್ದಾರೆ. ಹಿರಿತೆರೆಯ ಬಳಿಕ ಕಿರುತೆರೆಯಲ್ಲಿ (Tv) ಮಿಂಚಲು ರೆಡಿಯಾಗಿದ್ದಾರೆ.
View this post on Instagram
Advertisement
ಕನ್ನಡತಿ ಛಾಯಾ ಸಿಂಗ್ ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ರಿಯಾಲಿಟಿ ಶೋ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಿರುವಾಗ ತಮ್ಮ ಅಭಿಮಾನಿಗಳಿಗೆ ನಟಿ ಛಾಯಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಅಮೃತಧಾರೆ’ (Amruthadaare) ಸೀರಿಯಲ್ ಮೂಲಕ ಹೊಸ ಲವ್ ಸ್ಟೋರಿ ಹೇಳಲು ಹೊರಟಿದ್ದಾರೆ. ಇದನ್ನೂ ಓದಿ:ಕೋರ್ಟ್ ಮೆಟ್ಟಿಲು ಏರಿದ್ದ ಅಮಿತಾಭ್ ಮೊಮ್ಮಗಳಿಗೆ ಗೆಲುವು
Advertisement
View this post on Instagram
Advertisement
ಹುಡುಗ-ಹುಡುಗಿ ಹೊಂದ್ಕೊಂಡಿದ್ರೆ ಅದೊಂದು ಚೆಂದದ ಕಥೆ, ಅವರಿಬ್ರೂ ಕಿತ್ತಾಡ್ಕೊಂಡಿದ್ರೆ ಅದು ಬೇರೇನೇ ಕಥೆ ಎನ್ನುವುದು ಅಮೃತಧಾರೆ ಕಥೆಯಾಗಿದೆ. ರಾಜೇಶ್ ನಟರಂಗ (Rajesh Nataranga) ಅವರು ಅಮೃತಧಾರೆ ಸೀರಿಯಲ್‌ನ ನಾಯಕನಾಗಿದ್ದು, ಛಾಯಾಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.
Advertisement
ಈಗಾಗಲೇ ‘ಅಮೃತಾಧಾರೆ ಪ್ರೋಮೋ ರಿಲೀಸ್ ಆಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ. ಪ್ರೋಮೋ ಝಲಕ್ ನೋಡಿ ಫಿದಾ ಆಗಿರುವ ಪ್ರೇಕ್ಷಕರು ಅಮೃತಾಧಾರೆ ಧಾರಾವಾಹಿಯ ರಾಜೇಶ್- ಛಾಯಾ ಜೋಡಿ ನೋಡಲು ಎದುರು ನೋಡ್ತಿದ್ದಾರೆ.