ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಎ’ (A Film) ಸಿನಿಮಾ 28 ವರ್ಷಗಳ ಹಿಂದೆ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಇದೀಗ ಈ ಚಿತ್ರ ಕಳೆದ ವಾರ ರೀ-ರಿಲೀಸ್ ಆಗಿದೆ. ಮತ್ತೆ ಅದೇ ಕ್ರೇಜ್ನಿಂದ ಚಿತ್ರಪ್ರೇಮಿಗಳು ಈ ಸಿನಿಮಾಗೆ ಬೆಂಬಲಿಸಿದ್ದಾರೆ. ಸದ್ಯ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಎ’ ಚಿತ್ರದ ಪಾರ್ಟ್ 2 ಬಗ್ಗೆ ನಟಿ ಚಾಂದಿನಿ (Chandini) ಮಾಹಿತಿ ನೀಡಿದ್ದಾರೆ.
Advertisement
‘ಎ’ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವ ಬಗ್ಗೆ ಹಳೆಯ ದಿನಗಳನ್ನು ನಟಿ ಸ್ಮರಿಸಿದ್ದಾರೆ. ನನಗೆ ಆಗ ತುಂಬಾ ಚಿಕ್ಕ ವಯಸ್ಸು. ನಾನು ಸಿನಿಮಾ ನಟಿಯಾಗುವ ಯಾವ ಕನಸನ್ನೂ ಕಂಡವಳಲ್ಲ. ವಿ. ಮನೋಹರ್ ಸರ್ ಮೂಲಕ ಅಮೆರಿಕಾದಲ್ಲಿದ್ದ, ನನ್ನನ್ನು ಉಪೇಂದ್ರ ಅಪ್ರೋಚ್ ಮಾಡಿ ಸಿನಿಮಾಗೆ ಹೀರೋಯಿನ್ ಮಾಡಿದ್ದರು. ನನಗೆ ನಟನೆ, ಸಿನಿಮಾ ಏನೆಂದೂ ಸಹ ಗೊತ್ತಿರಲಿಲ್ಲ. ಆದರೆ, ನನ್ನನ್ನು ಯಶಸ್ವಿ ನಟಿಯಾಗಿ ಮಾಡಿದ ಎಲ್ಲಾ ಕ್ರೆಡಿಟ್ ಉಪೇಂದ್ರ ಅವರಿಗೆ ಸಲ್ಲಬೇಕು ಎಂದು ಮಾತನಾಡಿದ್ದಾರೆ.
Advertisement
Advertisement
ಈ ವೇಳೆ, ‘ಎ’ ಚಿತ್ರದ ಪಾರ್ಟ್ 2 ಮಾಡೋದಾಗಿ ನಟಿ ಚಾಂದಿನಿ ಘೋಷಿಸಿದ್ದಾರೆ. ಎ ಚಿತ್ರದ ಪಾರ್ಟ್ 2ಗೆ ಕಥೆ, ಚಿತ್ರಕಥೆ ನಾನೇ ಬರೆದಿದ್ದೇನೆ. ನಮ್ಮ ಚಿತ್ರಕ್ಕೆ ನಿರ್ಮಾಪಕ ಮಂಜು ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಕೈ ಜೋಡಿಸಿದ್ದಾರೆ. ಉಪೇಂದ್ರ ಬಳಿ ಹೋಗಿ ಪಾರ್ಟ್ 2ಗೆ ನಟಿಸಲು ಮತ್ತು ನಿರ್ದೇಶನ ಮಾಡಲು ಮನವಿ ಮಾಡುತ್ತೇವೆ. ಉಪೇಂದ್ರ ಅವರು ಓಕೆ ಎನ್ನುತ್ತಾರಾ? ಹೇಗೆ ಗೊತ್ತಿಲ್ಲ. ಆದರೆ ನಮ್ಮ ಚಿತ್ರಕ್ಕೆ ಬೆಂಬಲಿಸಲು ಕೋರಿಕೊಳ್ಳುತ್ತವೆ ಎಂದು ನಟಿ ತಿಳಿಸಿದ್ದಾರೆ.
Advertisement
ಮದುವೆ ಕುರಿತು ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಟಿ ಚಾಂದಿನಿ, ‘ಎ’ ಸಿನಿಮಾ ನನ್ನ ತಲೆಯನ್ನು ಹಾಳು ಮಾಡಿಬಿಟ್ಟಿದೆ. ನನಗೆ ಮದುವೆಯೆಂದರೇ ಭಯ ಎನ್ನುವಂತಾಗಿದೆ ಎಂದು ಜೋಕ್ ಮಾಡಿದ್ದಾರೆ. ಬಳಿಕ, ನಾನು ಮದುವೆಯೆಂದರೆ ಸ್ವಲ್ಪ ಭಯ ಬೀಳುವುದು ಹೌದು. ಏಕೆಂದರೆ, ಅದೊಂದು ಪಕ್ಕಾ ಕಮಿಟ್ಮೆಂಟ್. ಸಿಂಗಲ್ ಆಗಿರುವುದನ್ನು ನಾನು ಸದ್ಯ ಇಷ್ಟಪಡುತ್ತಿದ್ದೇನೆ, ಲೈಫ್ ಎಂಜಾಯ್ ಮಾಡುತ್ತಿದ್ದೇನೆ. ನನ್ನ ಪ್ರಕಾರ, ಮದುವೆ ಎಂದರೆ ಅದೊಂದು ಸ್ಯಾಕ್ರಿ ಫೈಸ್. ನಾವು ಮದುವೆಯಾದರೆ ಬಹಳಷ್ಟನ್ನು ತ್ಯಾಗ ಮಾಡಬೇಕಾಗುತ್ತದೆ.
ಹೀಗಾಗಿ ನಾನು ಮದುವೆ ಬಗ್ಗೆ ಬಹಳಷ್ಟನ್ನು ಯೋಚಿಸಿ ನಿರ್ಧಾರ ತಗೆದುಕೊಳ್ಳಬೇಕಿದೆ. ಅಂಥ ಕಮಿಟ್ಮೆಂಟ್ಗೆ ಯೋಗ್ಯ ವ್ಯಕ್ತಿ ಸಿಕ್ಕಾಗ ನಾನು ಖಂಡಿತ ಮದುವೆ ಆಗುತ್ತೇನೆ ಎಂದು ಚಾಂದಿನಿ ಮಾತನಾಡಿದ್ದಾರೆ.