ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಆಚಾರ್ (Chaithra Achar) ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ತಮ್ಮ ಬೋಲ್ಡ್ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್
`ಮಹಿರ’ (Mahira) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೈತ್ರಾ, ಆ ದೃಶ್ಯ, ಗಿಲ್ಕಿ, ತಲೆದಂಡ ಚಿತ್ರಗಳಲ್ಲಿ ನಟಿಸಿದ್ದಾರೆ. `ತಲೆದಂಡ’ (Thaledanda) ಚಿತ್ರದಲ್ಲಿ ಚೈತ್ರಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಸಂಚಾರಿ ವಿಜಯ್ (Sanchari Vijay) ಜೊತೆ ನಟಿ ತೆರೆಹಂಚಿಕೊಂಡಿದ್ದರು.
View this post on Instagram
ಕೆಂಪು ಬಣ್ಣದ ಮಾಡ್ರನ್ ಲುಕ್‌ನಲ್ಲಿ ನಟಿ ಚೈತ್ರಾ ಆಚಾರ್ ಮಿಂಚಿದ್ದಾರೆ. ರೆಟ್ರೋ ಸ್ಟೈಲಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
View this post on Instagram
`ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿದ್ದಾರೆ. ಬ್ಲಿಂಕ್, ಸ್ಟ್ರಾಬೆರಿ, ಯಾರಿಗೂ ಹೇಳಬೇಡಿ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿದೆ.