ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ

Public TV
1 Min Read
chaithra achar

‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradacche Yello) ಚಿತ್ರದ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ. ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಹಂಚಿಕೊಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

chaitra achar

‘ಮಹಿರ’ (Mahira) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಚೈತ್ರಾ ಆಚಾರ್ (Chaithra Achar)  ಅವರು ಆ ದೃಶ್ಯ, ಗಿಲ್ಕಿ, ತಲೆದಂಡ (Thaledanda) ಸಿನಿಮಾಗಳಲ್ಲಿ ನಾಯಕಿ ನಟಿಸಿದ್ದಾರೆ. ಗಾಯಕಿಯಾಗಿಯೂ ಚೈತ್ರಾ ಆಚಾರ್ ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕರಿಗೆ ಸುವರ್ಣಾವಕಾಶ, ಮಯಾಬಜಾರ್ 2016, ಗರುಡ ಗಮನ ವೃಷಭ ವಾಹನ ಸಿನಿಮಾದ ಹಾಡುಗಳಿಗೆ ಚೈತ್ರಾ ಧ್ವನಿಯಾಗಿದ್ದಾರೆ.

ಬ್ಲೌಸ್ ಇಲ್ಲದೇ ಹಳದಿ ಬಣ್ಣದ ಸೀರೆಯುಟ್ಟು ನಟಿ ಚೈತ್ರಾ ಮಿಂಚಿದ್ದಾರೆ. ಹಳದಿ ಸೀರೆ ಕೆಂಪು ಬಣ್ಣದ ಬಾರ್ಡರ್ ಸೀರೆಯಲ್ಲಿ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಚೈತ್ರಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್‌ಗೆ ಚೈತ್ರಾ, ರುಕ್ಮಿಣಿ ವಸಂತ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

Share This Article