ಕನ್ನಡದ ಆಲಿಯಾ ಭಟ್ (Alia Bhatt) ಎಂದೇ ಕರೆಯಲಾಗುವ ‘ಟೋಬಿ’ (Toby) ನಟಿ ಚೈತ್ರಾ ಆಚಾರ್ (Chaithra Achar) ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡದ ಜೊತೆ ತಮಿಳಿನಲ್ಲಿಯೂ ನಟಿಸುವ ಅವಕಾಶವನ್ನು ಚೈತ್ರಾ ಗಿಟ್ಟಿಸಿಕೊಂಡಿದ್ದಾರೆ.
ರಾಜ್ ಬಿ ಶೆಟ್ಟಿ ಜೊತೆ ‘ಟೋಬಿ’, ರಕ್ಷಿತ್ ಶೆಟ್ಟಿ ಜೊತೆ ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ರಿಲೀಸ್ ಬಳಿಕ ಚೈತ್ರಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ, ಅವರಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ತಮಿಳಿನಲ್ಲಿ 2 ಸಿನಿಮಾಗಳನ್ನು ಚೈತ್ರಾ ಒಪ್ಪಿಕೊಂಡಿದ್ದಾರೆ. ಸಿನಿಮಾ ಕೆಲಸ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಪವನ್ ಕಲ್ಯಾಣ್ ಜೊತೆಗಿನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ ರಾಮ್ ಚರಣ್ ಪತ್ನಿ
ಯಾವ ಪ್ರಾಜೆಕ್ಟ್? ಯಾರಿಗೆ ನಾಯಕಿಯಾಗಿ ತಮಿಳಿಗೆ (Tamil Films) ಕಾಲಿಡುತ್ತಿದ್ದಾರೆ ಎಂಬುದು ರಿವೀಲ್ ಆಗಿಲ್ಲ. ನಿರ್ಮಾಣ ಸಂಸ್ಥೆ ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಡಿವೋರ್ಸ್ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ
ಈಗಾಗಲೇ ಕನ್ನಡದ ಸಿನಿಮಾಗಳಿಂದ ರಮ್ಯಾ, ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ್, ಆಶಿಕಾ ರಂಗನಾಥ್ ಬಳಿಕ ಚೈತ್ರಾ ಕೂಡ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಲಿವುಡ್‌ನಲ್ಲಿ ಗೆಲ್ತಾರಾ ನಟಿ ಎಂದು ಕಾದುನೋಡಬೇಕಿದೆ.
ಇನ್ನೂ ಕನ್ನಡದ ಹ್ಯಾಪಿ ಬರ್ತ್‌ಡೇ ಟು ಮಿ, ಉತ್ತರಕಾಂಡ ಸೇರಿದಂತೆ ಹಲವು ಸಿನಿಮಾಗಳು ಚೈತ್ರಾ ಕೈಯಲ್ಲಿವೆ.