ಸ್ಯಾಂಡಲ್‌ವುಡ್ (Sandalwood) ನಟಿ ಭಾವನಾ ರಾವ್ (Bhavana Rao) ಹೊಸ ಬಗೆಯ ಪಾತ್ರಗಳಿಗೆ ಮಹತ್ವ ನೀಡೋದ್ರಲ್ಲಿ ಯಾವಾಗಲೂ ಮುಂದು. ಇದೀಗ ಹೊಸ ಫೋಟೋನಲ್ಲಿ ಚಿಟ್ಟೆಯಾಗಿ ಮಿಂಚಿದ್ದಾರೆ. ಗಾಳಿಪಟ ನಟಿಯ ಚಿಟ್ಟೆಯ ಅವತಾರ ಅಭಿಮಾನಿಗಳ ಗಮನ ಸೆಳೆದಿದೆ.
ವರ್ಷಕ್ಕೆ ಕಮ್ಮಿ ಸಿನಿಮಾಗಳಲ್ಲಿ ನಟಿಸಿದ್ರು ಕೂಡ ಸದಾ ಕಂಟೆಂಟ್‌ಗೆ ಪ್ರಾಮುಖ್ಯತೆ ಕೊಡುವ ನಟಿ ಭಾವನಾ ರಾವ್, ಇತ್ತೀಚಿಗೆ ‘ಹೊಂದಿಸಿ ಬರೆಯಿರಿ’ ಚಿತ್ರದ ಮೂಲಕ ಗಮನ ಸೆಳೆದರು. ಪ್ರವೀಣ್ ತೇಜ್‌ಗೆ ಜೋಡಿಯಾಗಿ ಮಿಂಚಿದ್ರು ಈ ಗಾಳಿಪಟ (Galipata) ಬೆಡಗಿ. ಇದನ್ನೂ ಓದಿ:ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು
View this post on Instagram
ಇದೀಗ ಕಪ್ಪು ಬಣ್ಣದ ಚಿಟ್ಟೆ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಭಾವನಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿಯ ಡಿಫರೆಂಟ್ ಲುಕ್ ಈಗ ಪಡ್ಡೆಹುಡುಗರ ದಿಲ್ ಗೆದ್ದಿದೆ.
View this post on Instagram
‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಭಾವನಾ ನಟನೆಗೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಮತ್ತೊಂದಿಷ್ಟು ಸಿನಿಮಾ ಕಥೆಗಳನ್ನ ಕೇಳ್ತಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಗಾಳಿಪಟ ನಾಯಕಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.