ಕನ್ನಡದ ‘ಜಾಕಿ’ ಬ್ಯೂಟಿ ಭಾವನಾ ಮೆನನ್ (Bhavana Menon) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು (Birthday) ಹೊಸ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಭಾವನಾ ನಟನೆಯ 86ನೇ ಚಿತ್ರದ ಬಗ್ಗೆ ಇಲ್ಲಿದೆ ಅಪ್‌ಡೇಟ್. ʻಭಜರಂಗಿ 2ʼ (Bhajarangi 2) ಬಳಿಕ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ.

ಸದ್ಯ ನಟಿ ಭಾವನಾ ಮೆನನ್ ಅವರು ‘ದಿ ಡೋರ್’ (The Door) ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾವನಾ ಬರ್ತ್‌ಡೇ ದಿನ ಚಿತ್ರದ ಪೋಸ್ಟರ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಎಂದೂ ಕಾಣಿಸಿಕೊಂಡಿರದ ಭಿನ್ನ ರೋಲ್‌ನಲ್ಲಿ ಜಾಕಿ ಭಾವನಾ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಜೈದೇವ್ ನಿರ್ದೇಶನದ ಈ ಸಿನಿಮಾದಲ್ಲಿ ಭಾವನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ರಾಜನ್ ಬಂಡವಾಳ ಹೂಡಿದ್ದಾರೆ.
ಕನ್ನಡದ ‘ರೋಮಿಯೋ’ (Romeo) ಚಿತ್ರದ ನಿರ್ಮಾಪಕ ನವೀನ್ (Naveen) ಜೊತೆ 2018ರಲ್ಲಿ ಭಾವನಾ ಮದುವೆಯಾದರು. ದಾಂಪತ್ಯ ಜೀವನ ಮತ್ತು ಸಿನಿಮಾ ಎರಡನ್ನು ಸಮರ್ಥವಾಗಿ ನಿಭಾಯಿಸುತ್ತಾ ನಟಿ ಬ್ಯುಸಿಯಾಗಿದ್ದಾರೆ. ಸದ್ಯ ಹುಟ್ಟುಹಬ್ಬದ ಅಂಗವಾಗಿ ಭಾವನಾ, ಪತಿ ಜೊತೆ ಚೆನ್ನೈನಲ್ಲಿದ್ದಾರೆ.


