ಸಹಜ ನಟನೆಯ ಮೂಲಕ ಗಮನ ಸೆಳೆದಿರುವ ಯಶ್ ನಟನೆಯ ‘ಮೊದಲ ಸಲ’ (Modala Sala) ಚಿತ್ರದ ನಾಯಕಿ ಭಾಮಾ (Bhama) ದಾಂಪತ್ಯ ಬದುಕಿನಲ್ಲಿ ಡಿವೋರ್ಸ್ (Divorce) ಬಿರುಗಾಳಿ ಬಿಸಿದೆ. ಉದ್ಯಮಿ ಅರುಣ್ ಜೊತೆಗಿನ ದಾಂಪತ್ಯಕ್ಕೆ ನಟಿ ಅಂತ್ಯ ಹಾಡಿದ್ದಾರೆ. ಸದ್ಯ ನಟಿಯ ಸೋಷಿಯಲ್ ಮೀಡಿಯಾದ ಪೋಸ್ಟ್ ಹಲವು ಚರ್ಚೆಗೆ ಗ್ರಾಸವಾಗಿದೆ.

View this post on Instagram
ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಭಾಮಾ, ಪರೋಕ್ಷವಾಗಿ ನಾನೀಗ ಒಂಟಿ ಎಂದು ಬರೆದುಕೊಂಡಿದ್ದಾರೆ. ಮಗಳು ಗೌರಿ ಜೊತೆಗಿನ ಫೋಟೋವನ್ನು ಹಂಚಿಕೊಂಡ ಭಾಮಾ, ನಾನು ‘ಸಿಂಗಲ್ ಮದರ್’ ಆಗಿದ್ದು ಮತ್ತಷ್ಟು ಬಲ ನೀಡಿತು ಎಂದು ಬರೆದುಕೊಂಡಿದ್ದಾರೆ.
2010ರಲ್ಲಿ ನಟ ಯಶ್ ಜೊತೆಗೆ ಮೊದಲ ಸಲ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪದಾರ್ಪಣೆ ಮಾಡಿದರು. ಅದಾದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶೈಲೂ, ಒಂದು ಕ್ಷಣದಲ್ಲಿ, ಆಟೋ ರಾಜ, ಬರ್ಫಿ, ಅಪ್ಪಯ್ಯ, ಅಂಬರ, ಅರ್ಜುನ, ರಾಗ ಸಿನಿಮಾಗಳ ಮೂಲಕ ಕನ್ನಡದಲ್ಲೂ ಗಮನ ಸೆಳೆದ ನಟಿ. ಈಗ ಇದೇ ನಟಿಯ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿದೆ.

