ಶಿವಣ್ಣ ನಟನೆಯ ‘ಅಮ್ಮಾವ್ರ ಗಂಡ’ (Ammavara Ganda Film) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಭಾಗ್ಯಶ್ರೀ (Bhagyashree) ಹಣೆಗೆ ಪೆಟ್ಟಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಡ್ ಮೇಲೆ ಮಲಗಿರುವ ನಟಿಯ ಫೋಟೋ ವೈರಲ್ ಆಗ್ತಿದ್ದಂತೆ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಆದಷ್ಟು ಬೇಗ ಭಾಗ್ಯಶ್ರೀ ಅವರು ಚೇತರಿಸಿಕೊಳ್ಳಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.
ನಟಿ ಭಾಗ್ಯಶ್ರೀ ಪಿಕಲ್‌ಬಾಲ್ ಆಡುವಾಗ ಪೆಟ್ಟು ಮಾಡಿಕೊಂಡಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಸರ್ಜರಿ ಮಾಡಿದ್ದು, ನಟಿಯ ಹಣೆಗೆ 13 ಹೊಲಿಗೆ ಹಾಕಿದ್ದಾರೆ. ಆಪರೇಷನ್ ಥಿಯೇಟರ್‌ನಲ್ಲಿ ಭಾಗ್ಯಶ್ರೀ ಮಲಗಿರುವ ಫೋಟೋ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಗಾಬರಿಗೊಂಡಿದ್ದಾರೆ.
ಅವರ ಆರೋಗ್ಯದ ಕುರಿತು ಭಾಗ್ಯಶ್ರೀ ಅವರಿಂದಾಗಲಿ, ಕುಟುಂಬ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆ ಆತಂಕಪಡುವಂಥದ್ದು ಏನಾಗಿಲ್ಲ ಎಂದು ಹೇಳಲಾಗುತ್ತಿದೆ. ನಟಿಯ ಕಡೆಯಿಂದ ಸ್ಪಷ್ಟನೆ ಸಿಗುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು
ಇನ್ನೂ 1989ರಲ್ಲಿ ‘ಮೈನೆ ಪ್ಯಾರ್ ಕಿಯಾ’ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ನಟಿಸಿದರು. ಬಹುಭಾಷಾ ನಟಿಯಾಗಿ ಗುರುಸಿಕೊಂಡಿದ್ದಾರೆ. ಕನ್ನಡದಲ್ಲೂ ಶಿವಣ್ಣ ಜೊತೆ ಭಾಗ್ಯಶ್ರೀ ತೆರೆಹಂಚಿಕೊಂಡಿದ್ದಾರೆ.