ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಆಶಿತಾ(Ashitha) ಮತ್ತೆ ಸುದ್ದಿಯಲ್ಲಿದ್ದಾರೆ. `ಆಕಾಶ್’ ಸಿನಿಮಾದಲ್ಲಿ ಪುನೀತ್ (Puneeth) ತಂಗಿಯಾಗಿ ನಟಿಸಿದ್ದ ಆಶಿಕಾ, ಅವರ ಜೊತೆಗಿನ ಒಡನಾಟದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತವರಿನ ಸಿರಿ ಮತ್ತು ಆಕಾಶ್ ಚಿತ್ರದಲ್ಲಿ ಶಿವಣ್ಣ ಮತ್ತು ಪುನೀತ್ ತಂಗಿಯಾಗಿ ಆಶಿತಾ ನಟಿಸಿದ್ದರು. ಇದೀಗ ಅಪ್ಪು ಜೊತೆಗಿನ ಒಡನಾಟದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಅದೆಷ್ಟೋ ಜನರೊಂದಿಗೆ ನಟಿಸಿದ್ದೇನೆ, ಅದರಲ್ಲಿ ಅಪ್ಪು ಮಾತ್ರ ನಿಜಕ್ಕೂ ಅದ್ಭುತ ವ್ಯಕ್ತಿ. ಇನ್ನು ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ನಾನು, ರಮ್ಯಾ(Ramya) ಮತ್ತು ಅಪ್ಪು(Appu) ಸಾಕಷ್ಟು ಬಾರಿ ಲಾಂಗ್ ಡ್ರೈವ್ ಹೋಗಿದ್ದೇವೆ. ಪುನೀತ್ ನನ್ನ ಅಣ್ಣನ ಸಮಾನರು ಎಂದಿದ್ದಾರೆ. ಇದನ್ನೂ ಓದಿ:ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ
ನಾನು ಡ್ಯಾನ್ಸ್ ಮಾಡೋದು ನೋಡಿ, ನನ್ನ ಹೊಗೊಳೋರು. ಅಪ್ಪು ಕೂಡ ಒಬ್ಬ ಒಳ್ಳೆಯ ಡ್ಯಾನ್ಸರ್ ಆಗಿ ನನ್ನ ಹೊಗಳೋದು ನಿಜಕ್ಕೂ ಇದು ದೊಡ್ಡ ವಿಚಾರ. ಅಪ್ಪು ತುಂಬಾ ಸಿಂಪಲ್ ಆಗಿದ್ದರು. ನನ್ನ ಸಹೋದರಿಯ ಮದುವೆಗೆ 3 ದಿನ ಮುನ್ನವೇ ಕರೆದಿದ್ದೆ, ಅಪ್ಪು ಕೂಡ ಬಂದಿದ್ದರು. ಅವರು ಬೇರೆ ಸೆಲೆಬ್ರಿಟಿಗಳ ಹಾಗಲ್ಲ. ಗಂಟೆಗಟ್ಟಲೇ ನಮ್ಮ ಮದುವೆಯಲ್ಲಿ ಇದ್ದರು.
ಅದರಲ್ಲೂ ಅಪ್ಪು ಅವರಿಗೆ ಮುಸ್ಲಿಮರ ದಮ್ ಬಿರಿಯಾನಿ ಅಂದ್ರೆ ಸಖತ್ ಇಷ್ಟ. ಅದಕ್ಕಾಗಿ ಎಲ್ಲರಂತೆ 15 ನಿಮಿಷ ಕ್ಯೂನಲ್ಲಿ ನಿಂತು ತಿಂದರು. ಎರೆಡೆರಡು ಸಲ ಬಿರಿಯಾನಿ ಹಾಕಿಸಿಕೊಂಡು ಎಂಜಾಯ್ ಮಾಡಿದ್ದರು ಎಂದು ಅಪ್ಪು ಜೊತೆಗಿನ ನೆನಪನ್ನ ಆಶಿತಾ ಹೇಳಿದ್ದಾರೆ.