ಕೊಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಬೆನ್ನಲ್ಲೇ ಹಲವು ನಟ- ನಟಿಯರು ಈ ಕುರಿತು ಧ್ವನಿಯೆತ್ತಿದ್ದಾರೆ. ನೈಟ್ ಡ್ಯೂಟಿ ಟ್ರೈನಿ ವೈದ್ಯೆಗೆ ರೇಪ್ ಆದರೆ ಇನ್ನೆಲಿ ರಕ್ಷಣೆ ಎಂದು ನಟಿ ಆಶಿಕಾ ರಂಗನಾಥ್ (Ashika Ranganath) ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ: ಯಶ್ ಕುರಿತು ರಾಧಿಕಾ ಲವ್ಲಿ ಪೋಸ್ಟ್
ಕೊಲ್ಕತ್ತಾದ ಬರ್ಬರತೆಯ (Kolkata Rape-Murder) ಕುರಿತು ತಮ್ಮ ಇನ್ಸ್ಟಾಗ್ರಾಂ ಬರೆದುಕೊಂಡಿರುವ ಆಶಿಕಾ ರಂಗನಾಥ್, ಆರ್‌ಜಿ ಕರ್ ಮೆಡಿಕಲ್ ಕಾಲೇಜ್‌ನಲ್ಲಿ ನಡೆದ ಘಟನೆ ಕೇವಲ ವೈದ್ಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ, ಎಲ್ಲ ವೈದ್ಯಕೀಯೇತರ ವೃತ್ತಿಯಲ್ಲಿರುವವರೇ ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ, ಆ ಮಹಿಳೆ ಕೆಲಸ ಮಾಡುವ ಜಾಗದಲ್ಲಿಯೇ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೆಲ್ಲಿ? ಇದು ನಿರ್ಭಯಾ ಪ್ರಕರಣಕ್ಕಿಂತ ಏನು ಕಡಿಮೆಯಿಲ್ಲ ಎಂದಿದ್ದಾರೆ ಆಶಿಕಾ.
ಕೆಲವು ನಾಯಕರು ಹೇಳುವ ಪ್ರಕಾರ, ಮಧ್ಯರಾತ್ರಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಅಂತೆ. ಆದ್ರೆ ಅವಳು ಹೋಗಿದ್ದು ನೈಟ್ ಡ್ಯೂಟಿಗೆ, ಅತ್ಯಂತ ನೆಮ್ಮದಿಯ ವಲಯದಲ್ಲಿ ಇದ್ದಂತವಳು. ಅವಳಿಗೆ ಅಲ್ಲಾದರೂ ರಕ್ಷಣೆ ಸಿಕ್ಕಿದ್ಯಾ. ಈ ತರಹದ್ದು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಕೂಡ ಆಗಬಹುದು. ಇದನ್ನೂ ಆದಷ್ಟು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಆ ಶಿಕ್ಷೆ ಇಂತಹ ಸೈಕೋಪಾತ್‌ಗಳಿಗೆ ಎಚ್ಚರಿಕೆಯ ಘಂಟೆಯಾಗಬೇಕು ಎಂದು ಆಶಿಕಾ ರಂಗನಾಥ್ ಆಗ್ರಹಿಸಿದ್ದಾರೆ.
ಅಂದಹಾಗೆ, ಮೆಗಾಸ್ಟಾರ್ ಚಿರಂಜೀವಿ ಜೊತೆ ತೆಲುಗಿನ ‘ವಿಶ್ವಾಂಭರ’, ತಮಿಳಿನ ನಟ ಕಾರ್ತಿ ಜೊತೆ ‘ಸರ್ದಾರ್ 2’ ಸಿನಿಮಾದಲ್ಲಿ ಕನ್ನಡದ ನಟಿ ಆಶಿಕಾ ರಂಗನಾಥ್ ಬ್ಯುಸಿಯಾಗಿದ್ದಾರೆ.