ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ನಿರ್ಮಾಣ ಮಾಡಿರುವ, ಗೌರಿಶಂಕರ್ (Gowri Shankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete Film) ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಕೆರೆಬೇಟೆಯ ಸುತ್ತ ನಾನಾ ತೆರನಾದ ಕುತೂಹಲಗಳು, ಚರ್ಚೆಗಳು ಮೂಡಿಕೊಂಡಿವೆ. ಅದರಲ್ಲಿಯೂ ಇದರೊಳಗಿನ ಪಾತ್ರಗಳ ಬಗ್ಗೆಯೂ ಪ್ರೇಕ್ಷಕರ ಆಕರ್ಷಿತರಾಗಿದ್ದಾರೆ. ಒಂದಷ್ಟು ಪಳಗಿದ ಕಲಾವಿದರ ಜೊತೆಜೊತೆಗೇ ಹೊಸಾ ಪ್ರತಿಭೆಗಳು ಕೂಡಾ ಕೆರೆಬೇಟೆಯ ತಾರಾಬಳದಲ್ಲಿ ಸೇರಿಕೊಂಡಿದ್ದಾರೆ. ಈಗಾಗಲೇ ‘ವೇದ’ (Vedha) ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಶಾ ಸುಜಯ್ (Asha Sujay) ಇಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.
Advertisement
ಇವರ ಪಾತ್ರದ ಸಣ್ಣ ಝಲಕ್ಕೊಂದು ಟ್ರೈಲರ್‌ನಲ್ಲಿ ಸುಳಿದಿದೆ. ದಶಕಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವವರು ಆಶಾ. ಅವರಿಗೆ ಕೆರೆ ಬೇಟೆಯ ಮೂಲಕ ಬಹುಕಾಲದಿಂದ ಹಂಬಲಿಸುತ್ತಿದ್ದ, ಸಿನಿಮಾದುದ್ದಕ್ಕೂ ಪ್ರಾಧಾನ್ಯತೆ ಇರುವ ಪಾತ್ರ ಸಿಕ್ಕಿದೆ. ಅವರಿಲ್ಲಿ ನಾಯಕಿಯ ಅಮ್ಮನ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಊರಿಗೇ ಪ್ರತಿಷ್ಠಿತವಾಗಿರುವ, ದೊಡ್ಡ ಮನೆಯ ಜವಾಬ್ದಾರಿಯುತ ಗೃಹಿಣಿಯಾಗಿ ಆಶಾ ಕಾಣಿಸಿಕೊಂಡಿದ್ದಾರೆ. ಪ್ರೀತಿಯಿಂದ ಸಾಕಿದ ಮಗಳನ್ನೇ ಸರ್ವಸ್ವ ಅಂದುಕೊಂಡಿರುವ ಅಮ್ಮನಾಗಿ, ಆ ನಂತರದ ಹಠಾತ್ ಸನ್ನಿವೇಶಗಳನ್ನು ಕಂಡು ಮರುಗುವ ಭಾವನಾತ್ಮಕ ಪಾತ್ರಕ್ಕೆ ಜೀವ ತುಂಬಿದ ತುಂಬು ಖುಷಿ ಆಶಾರಲ್ಲಿದೆ. ಇದನ್ನೂ ಓದಿ:ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!
Advertisement
Advertisement
ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.