ಸಾಲು ಸಾಲು ಸಿನಿಮಾ ಸಂಭ್ರಮದಲ್ಲಿ ನಟಿ ಅರ್ಚನಾ ಕೊಟ್ಟಿಗೆ

Public TV
2 Min Read
Archana Kottige 4

ಟಿ ಅರ್ಚನಾ ಕೊಟ್ಟಿಗೆ (Archana Kottige) ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ (Sandalwood) ಮಟ್ಟಿಗೆ ಇವರು ಭಿನ್ನ ಆಲೋಚನೆಯ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ, ಅವರಿಗೆ ನಾಯಕಿಯಾಗಿಯೇ ಫೇಮಸ್ ಆಗಬೇಕೆಂಬ ಉದ್ದೇಶವಿಲ್ಲವಂತೆ.

Archana Kottige 5

ಪಾತ್ರ ಯಾವುದಾದರೂ ಅದು ಸವಾಲಿನದ್ದಾಗಿರಬೇಕು, ಪ್ರೇಕ್ಷಕರ ಮನಸಲ್ಲಿ ಅಚ್ಚಳಿಯದೇ ಛಾಪು ಮೂಡಿಸಬೇಕು ಅಂತಾರೆ ಅರ್ಚನಾ. ತಮ್ಮ ಆಲೋಚನೆಯಂತೆಯೇ ಈಗಾಗಲೇ ಸಾಕಷ್ಟು ಅವಕಾಶಗಳು ಸಿಕ್ಕಿದ್ದು, ಇನ್ನೇನು ಅವರು ಅಭಿನಯಿಸಿರುವ ಚಿತ್ರಗಳೆಲ್ಲ ಸಾಲು ಸಾಲಾಗಿ ಬಿಡುಗಡೆಯ ಸರತಿಯಲ್ಲಿವೆ. ಇದನ್ನೂ ಓದಿ:ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್

Archana Kottige 1

ಇತ್ತೀಚೆಗೆ ಹೇಗಾಗಿದೆಯೆಂದರೆ, ಬಿಡುಗಡೆಯಾಗೋ ಸಿನಿಮಾಗಳಲ್ಲೆಲ್ಲ ಅರ್ಚನಾ ಇರುವಿಕೆಯೇ ದಟ್ಟವಾಗಿ ಕಾಣಿಸುತ್ತಿದೆ. ವಾರಗಳ ಹಿಂದೆಯಷ್ಟೇ ಬಿಡುಗಡೆಗೊಂಡು, ಇದೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru). ಅದರಲ್ಲಿಯೂ ಅರ್ಚನಾ ಕೊಟ್ಟಿಗೆ ಒಂದೊಳ್ಳೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದಕ್ಕೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಕೂಡ ಕೇಳಿ ಬರುತ್ತಿವೆ. ಇದರ ಬೆನ್ನಲ್ಲಿಯೇ ಅರ್ಚನಾ ನಟಿಸಿರುವ ಮತ್ತೊಂದಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

Archana Kottige 2

ಬಯಲು ಸೀಮೆ, ಎಲ್ಲರ ಕಾಲೆಳೆಯುತ್ತೆ ಕಾಲ, ಜುಗಲ್ಬಂದಿ ಮುಂತಾದ ಚಿತ್ರಗಳೀಗ ಬಿಡುಗಡೆಯ ಹೊಸ್ತಿಲಿನಲ್ಲಿವೆ. ಈ ಎಲ್ಲ ಚಿತ್ರಗಳಲ್ಲಿ ಒಂದಕ್ಕಿಂತ ಒಂದು ವಿಶೇಷ ಪಾತ್ರಗಳಲ್ಲಿ ಅರ್ಚನಾ ನಟಿಸಿದ್ದಾರಂತೆ. ಜುಗಲ್ಬಂದಿ ಚಿತ್ರದಲ್ಲಿ ಅರ್ಚನಾ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಸಿದ್ದರೆ, ಬಯಲು ಸೀಮೆ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರ ಕಾಲೆಳೆಯುತ್ತೆ ಕಾಲ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಇಲ್ಲಿ ಅರ್ಚನಾ ಹಳ್ಳಿ ಸೀಮೆಯ ಬಜಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಚಿತ್ರಗಳೂ ಸಾಲು ಸಾಲಾಗಿ ಬಿಡುಗಡೆಗೊಳ್ಳಲು ಸಜ್ಜಾಗಿವೆ.

Archana Kottige 3

2018ರಲ್ಲಿ ‘ಅರಣ್ಯಕಾಂಡ’ ಚಿತ್ರದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟವರು ಅರ್ಚನಾ ಕೊಟ್ಟಿಗೆ. ಆ ನಂತರ ವಾಸು ನಾನ್ ಪಕ್ಕಾ ಕಮರ್ಷಿಯಲ್, ಮೇಡ್ ಇನ್ ಬೆಂಗಳೂರು, ಡಿಯರ್ ಸತ್ಯಾ, ಕಟಿಂಗ್ ಶಾಪ್, ಹೊಂದಿಸಿ ಬರೆಯಿರಿ, ಪ್ಯಾನ್ ಇಂಡಿಯಾ ಚಿತ್ರವಾದ ವಿಜಯಾನಂದ ಮುಂತಾದವುಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.

 

ಹೀಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಅರ್ಚನಾಗೆ ಒಳ್ಳೆ ನಟಿ ಅನ್ನಿಸಿಕೊಳ್ಳುವ ಹೆಬ್ಬಯಕೆ ಇದೆ. ಇದೀಗ ಮತ್ತೊಂದಷ್ಟು ಅವಕಾಶಗಳೂ ಅವರನ್ನರಸಿ ಬರುತ್ತಿವೆ. ಸದ್ಯ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿರೋ ಅರ್ಚನಾ, ಆ ಬಗೆಗಿನ ಮಾಹಿತಿಗಳನ್ನು ಸದ್ಯದಲ್ಲಿಯೇ ಪ್ರೇಕ್ಷಕರ ಮುಂದಿಡಲಿದ್ದಾರೆ.

Web Stories

Share This Article