ಕಿರುತೆರೆ `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾಗಿರುವ ಪುಷ್ಪ ಪಾತ್ರಧಾರಿ ಅಪೂರ್ವ ಅವರು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗಳ ರೌಂಡ್ ನಡೆಯುತ್ತಿದ್ದು, ಅಪೂರ್ವ (Apoorva) ಅವರಿಗೆ ಮಗಳ ಬಿಗ್ ಸರ್ಪ್ರೈಸ್ (Surprise) ಕೊಟ್ಟಿದ್ದಾರೆ. ಮಗಳ ಗಿಫ್ಟ್ ನೋಡಿ ಅಪೂರ್ವ ಖುಷಿಯಾಗಿದ್ದಾರೆ.
View this post on Instagram
ಸೂಪರ್ ಕ್ವೀನ್ಸ್ (Super Queens) ಮೂಲಕ ತಮ್ಮ ಜೀವನದ ತೆರೆಹಿಂದಿನ ಕಥೆಯನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಹಾಗೆಯೇ ನಟಿ ಅಪೂರ್ವ ಅವರ ಜೀವನದ ಕಥೆ ಪ್ರೇಕ್ಷಕರನ್ನು ಕೂಡ ಭಾವುಕರನ್ನಾಗಿಸಿದೆ. ಇನ್ನೂ ಅಮ್ಮ -ಮಗಳ ರೌಂಡ್‌ನಲ್ಲಿ ಮಗಳು, ಕೆಲವು ಪ್ರಶ್ನೆಗಳನ್ನ ತಾಯಿ ಅಪೂರ್ವಗೆ ಕೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ
View this post on Instagram
ನನ್ನ ಮೊದಲ ಪ್ರಶ್ನೆ ಇದು. ಯಾವತ್ತಾದ್ದರೂ ಅನಿಸಿದ್ಯಾ ನನ್ನ ಮಗಳು ಇಲ್ಲದಿದ್ದರೆ ನಾನು ಖುಷಿಯಾಗಿರುತ್ತಿದ್ದೆ ಅಥವಾ ಗಂಡು ಮಗು ಆಗಿದ್ದರೆ ಇನ್ನೂ ಖುಷಿಯಾಗಿರುತ್ತಿದ್ದೆ ಕಷ್ಟ ಪಡುತ್ತಿರಲಿಲ್ಲ ಅನಿಸಿದ್ಯಾ ಎಮದು. ಆಗ 100ರಲ್ಲಿ 1% ನನಗೆ ಈ ರೀತಿ ಅನಿಸಿಲ್ಲ. ಎಷ್ಟೋ ದೇವರಲ್ಲಿ ಹರಿಕೆ ಕಟ್ಟಿಕೊಂಡು ಮೊದಲು ಹೆಣ್ಣು ಮಗು ಆಗಬೇಕು ಎಂದು ಹುಟ್ಟಿರುವ ಮಗು ನೀನು ಎಂದು ಅಪೂರ್ವ ಉತ್ತರಿಸಿದ್ದಾರೆ.
View this post on Instagram
ಮತ್ತೆ ಮದುವೆ ಆಗಬೇಕು ಎಂದು ಯೋಚನೆ ಕೂಡ ಮಾಡಿಲ್ಲ ಯಾಕೆ ಎಂದು ಅಮ್ಮನಿಗೆ ಕೇಳಿದ್ದಾರೆ. ಮದುವೆ ಅಂದ್ರೆ ಏನು ಅದರ ಮಹತ್ವ ಎಲ್ಲ ಅರ್ಥ ಆಗೋಕು ಮುಂಚೆ ಮದುವೆ ಆಗಿದ್ದು ಎಷ್ಟೊಂದು ಸಮಸ್ಯೆ ನೋಡ್ಬಿಟ್ಟು ಮದುವೆ ಆಗಬೇಕು ಅನಿಸಲಿಲ್ಲ. ಕೈಯಲ್ಲಿ ಒಂದು ಹೆಣ್ಣು ಮಗುವಿಗೆ ಬರುವ ಜನರ ಮೆಂಟಾಲಿಟಿ ಹೇಗೆ ಇರುತ್ತೆ. ಏನೇ ಆಗಲಿ ಫಸ್ಟ್ ತಪ್ಪು ಎಂದು ಹೇಳುವುದು ಹೆಣ್ಣು ಮಕ್ಕಳ ಮೇಲೆ ಹೀಗಾಗಿ ಯೋಚನೆ ಮಾಡಿಲ್ಲ ಮಾಡುವ ಯೋಚನೆ ಮಾಡಲ್ಲ. ಮದುವೆ ಅನ್ನೋದು ಒಂದು ಜವಾಬ್ದಾರಿ ರೀತಿ ಬಂದವರನ್ನು ನಾವು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ನಟಿ ಅಪೂರ್ವ ಮಾತನಾಡಿದ್ದಾರೆ.
ಇನ್ನೂ ಈ ವೇಳೆ ಅಮ್ಮನಿಗೆ ಚಿನ್ನದ ಮಾಂಗಲ್ಯ ಗಿಫ್ಟ್ ಮಾಡಿದ್ದಾರೆ. ತನಗೆ ಕಾರು ಖರಿದೀಸಲು ಎಂದು ಇಟ್ಟ ಹಣದಲ್ಲಿ ತಾಯಿಗೆ ಚಿನ್ನದ ಮಾಂಗಲ್ಯ ಕಾಣಿಕೆಯಾಗಿ ನೀಡಿದ್ದಾರೆ. ಮಗಳ ಪ್ರೀತಿಗೆ ನಟಿ ಅಪೂರ್ವ ಭಾವುಕರಾಗಿದ್ದಾರೆ.