ಕಾಲಿವುಡ್ನ `ಸೂರರೈ ಪೋಟ್ರು’ (Surarai Potru) ಚಿತ್ರದ ಮೂಲಕ ಗಮನ ಸೆಳೆದ ನಟಿ ಅಪರ್ಣಾ ಬಾಲಮುರಳಿ(Aparna Balamurali) ಮತ್ತೆ ಸುದ್ದಿಯಲ್ಲಿದ್ದಾರೆ. `ಸೂರರೈ ಪೋಟ್ರು’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯ ಗರಿ (National Award Winner) ಮುಡಿಗೇರಿಸಿಕೊಂಡಿದ್ದರು. ಈಗ ಬಾಡಿ ಶೇಮಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ದಪ್ಪಗಾಗಿದ್ದಾರೆ ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಆಗಿ ನಟಿ ತಿರುಗೇಟು ನೀಡಿದ್ದಾರೆ.
View this post on Instagram
Advertisement
ತೆಲುಗು ಮತ್ತು ತಮಿಳು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಅಪರ್ಣಾ ಬಾಲಮುರಳಿ ಅವರು ಸುಧಾ ಕೊಂಗರ ನಿರ್ದೇಶನದ `ಸೂರರೈ ಪೋಟ್ರು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡರು. ಸೂರ್ಯ ಅವರ ಪತ್ನಿಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು. ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.
Advertisement
View this post on Instagram
Advertisement
ಇನ್ನು ಮೊದಲಿಂದಲೂ ಗುಂಡಗಿದ್ದ ನಟಿ ಅಪರ್ಣಾ ಈಗ ಮತ್ತಷ್ಟು ದಪ್ಪಗಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಬಾಡಿ ಶೇಮಿಂಗ್ ಕಾಟ ಶುರುವಾಗಿದೆ. ಇತ್ತೀಚೆಗೆ `ನೀತಂ ಒರು ವಾನಂ’ ಅಪರ್ಣಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ನಟಿಯ ಹುಟ್ಟುಹಬ್ಬ ಸಂದರ್ಭದಲ್ಲಿ ಲಂಗ ದಾವಣಿ ಲುಕ್ನಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿರುವ ಪೋಸ್ಟರ್ವೊಂದನ್ನ ರಿಲೀಸ್ ಮಾಡಲಾಗಿತ್ತು. ಅಪರ್ಣಾ ಲುಕ್ ನೋಡಿ ಕೆಲ ನೆಟ್ಟಿಗರು, ಅದೆಷ್ಟು ದಪ್ಪಗಾಗಿದ್ದೀರಾ ನೀವು ಬರೀ ತಾಯಿಯ ಪಾತ್ರಕ್ಕೆ ಲಾಯಕ್ಕು ಎಂದು ನಟಿಗೆ ಟೀಕೆ ಮಾಡಿದ್ದಾರೆ. ಅವರ ಫೋಟೋಗಳನ್ನ ಕೂಟ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ:‘ಮೀಟು’ ಅನ್ನೋದು ಕಾಮನ್ ಆಗಿದೆ, ಊರು ಅಂದ್ಮೇಲೆ ಸಮಸ್ಯೆ ಇರುತ್ತೆ: ನಿರ್ದೇಶಕ ಶಶಾಂಕ್
Advertisement
View this post on Instagram
ಇದೀಗ ಟ್ರೋಲಿಗರಿಗೆ ನಟಿ ಅಪರ್ಣಾ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದೇಹದ ತೂಕಕ್ಕೂ ಟ್ಯಾಲೆಂಟ್ಗೂ ಯಾವುದೇ ಸಂಬಂಧವಿಲ್ಲ. ದೇಹದಲ್ಲಿನ ಕೆಲ ಸಮಸ್ಯೆಗಳಿಂದ ವ್ಯಕ್ತಿಯ ತೂಕ ಹೆಚ್ಚಿಸುತ್ತದೆ. ನನಗೆ ತಾಯಿ ಪಾತ್ರ ಮಾಡುವಷ್ಟು ವಯಸ್ಸಾಗಿಲ್ಲ. ತೆಳ್ಳಗಿರುವುದು ನಟಿಯಾಗಲು ಇರಬೇಕಾದ ಅರ್ಹತೆಗಳಲ್ಲಿ ಒಂದಲ್ಲ ಎಂದು ಅಪರ್ಣಾ ತಿರುಗೇಟು ನೀಡಿದ್ದಾರೆ. ನಟಿಯ ಪ್ರತಿಕ್ರಿಯೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.