ಲೆಜೆಂಡರಿ ನಿರ್ದೇಶಕನ ಮಗನ ಜೊತೆ ಅನುಷ್ಕಾ ಮದ್ವೆ

Public TV
2 Min Read
anushka

ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಕ್ರಿಕೆಟ್ ಆಟಗಾರನ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸುದ್ದಿ ಬಗ್ಗೆ ಸ್ವತಃ ಅನುಷ್ಕಾ ಸ್ಪಷ್ಟನೆ ನೀಡಿದ್ದರು. ಇದೀಗ ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಹೌದು. ಲೆಜೆಂಡರಿ ನಿರ್ದೇಶಕ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವೆಲಮುಡಿ ಜೊತೆ ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಷ್ಕಾ ಮತ್ತು ಪ್ರಕಾಶ್ ಇಬ್ಬರು ಕೂಡ ಅನೇಕ ವರ್ಷಗಳಿಂದ ಪರಿಚಯವಿದ್ದು, ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಪ್ರಕಾಶ್‍ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಆಗಿದೆ.

anushka shetty 1

2014ರಲ್ಲಿ ಪ್ರಕಾಶ್, ಕನ್ನಿಕಾ ಧಿಲ್ಲಾನ್ ಜೊತೆ ವಿವಾಹವಾಗಿದ್ದರು. ಆದರೆ ಮದುವೆಯಾದ ಮೂರು ವರ್ಷಗಳ ನಂತರ ಅಂದರೆ 2017ರಲ್ಲಿ ಪತ್ನಿಯಿಂದ ದೂರ ಆಗಿ ಡಿವೋರ್ಸ್ ಪಡೆದುಕೊಂಡಿದ್ದರು. ಪ್ರಕಾಶ್ ವಿಚ್ಛೇದನ ಪಡೆದ ನಂತರ ಅನುಷ್ಕಾರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಕೂಡ ತಂದೆಯಂತೆ ನಿರ್ದೇಶಕರಾಗಿದ್ದಾರೆ. ಸದ್ಯಕ್ಕೆ ಇವರಿಬ್ಬರು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಅನುಷ್ಕಾ ಉತ್ತರ ಭಾರತ ಮೂಲದ ಕ್ರಿಕೆಟ್ ಆಟಗಾರನ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು.

anushka 3 1582894905

ಈ ಬಗ್ಗೆ ಮಾತನಾಡಿದ ಅನುಷ್ಕಾ, ನಾನು ಯಾವ ಕ್ರಿಕೆಟ್ ಆಟಗಾರನನ್ನು ಮದುವೆ ಆಗುತ್ತಿಲ್ಲ. ಯಾವುದಾದರು ವಿಷಯ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಪರಿಶೀಲಿಸಿ. ನನ್ನ ಮದುವೆಯ ನಿರ್ಧಾರವನ್ನು ನಾನು ನನ್ನ ಪೋಷಕರಿಗೆ ಬಿಟ್ಟಿದ್ದೇನೆ. ನನ್ನ ತಂದೆ-ತಾಯಿ ಆಯ್ಕೆ ಮಾಡಿದ ಹುಡುಗನನ್ನು ನಾನು ಮದುವೆ ಆಗುತ್ತೇನೆ. ನಾನು ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ. ಆದರೆ ಯಾವುದೇ ಕ್ರಿಕೆಟ್ ಆಟಗಾರನನ್ನು ನಾನು ಮದುವೆ ಆಗುತ್ತಿಲ್ಲ ಎಂದಿದ್ದರು.

66985498

ಸದ್ಯಕ್ಕೆ ಅನುಷ್ಕಾ ‘ನಿಶ್ಯಬ್ದಂ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿಶಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *