ಬೆಂಗಳೂರು: ಕನ್ನಡದ ಮೇರು ನಟ ಡಾ ರಾಜ್ ಕುಮಾರ್ ಅವರ 90ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗಿದೆ. ಜೊತೆಗೆ ಕನ್ನಡ ಸ್ಟಾರ್ ನಟ-ನಟಿಯರು ರಾಜಣ್ಣ ಅವರನ್ನು ನೆನಪಿಸಿಕೊಂಡು ಅವರಿಗೆ ಶುಭಕೋರಿದ್ದರು. ಆದರೆ ಇದೀಗ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರು ಕೂಡ ಅವರನ್ನು ನೆನಪಿಸಿಕೊಂಡಿದ್ದಾರೆ.
ಡಾ.ರಾಜ್ ಕುಮಾರ್ 90ನೇ ಹುಟ್ಟುಹಬ್ಬಕ್ಕೆ ಅನುಷ್ಕಾ ಅವರು ಸಹ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ. ನಟಿ ಅನುಷ್ಕಾ ತನ್ನ ಫೇಸ್‍ಬುಕ್ ಪೇಜಿನಲ್ಲಿ “90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಲೆಜೆಂಡ್ ಡಾ.ರಾಜ್ ಕುಮಾರ್ ಸರ್ ಅವರ ನೆನಪು” ಎಂದು ಬರೆದುಕೊಂಡಿದ್ದಾರೆ. ಜೊತೆ ರಾಜ್‍ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’ ಸಿನಿಮಾದಲ್ಲಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅನುಷ್ಕಾ ಅವರು ರಾಜ್‍ಕುಮಾರ್ ಅವರಿಗೆ ವಿಶ್ ಮಾಡಿ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ರಾಜ್‍ಕುಮಾರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ರಾಜಣ್ಣ ಮೇಲಿನ ಅಭಿಮಾನ ಕಂಡು ಅಣ್ಣಾವ್ರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ನಟಿ ಅನುಷ್ಕಾ ಶೆಟ್ಟಿವರು ಮೂಲತಃ ಕರ್ನಾಟಕದ ಕರಾವಳಿ ಮೂಲದವಾಗಿದ್ದಾರೆ. ಸದ್ಯಕ್ಕೆ ಅನುಷ್ಕಾ ಶೆಟ್ಟಿ ಅವರು ‘ಸೈಲೆನ್ಸ್’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.