ಕನ್ನಡದ ಹುಡುಗಿ ಅನುಷ್ಕಾ ಶೆಟ್ಟಿ (Anushka Shetty) 15 ವರ್ಷಗಳಿಂದ ತೆಲುಗು ಚಿತ್ರರಂಗ ಆಳಿದವರು. ಸಾಕಷ್ಟು ಪಾತ್ರಗಳಲ್ಲಿ ನಟಿಸಿ ಆ ಪಾತ್ರವೇ ತಾವಾಗಿ ಜೀವ ತುಂಬಿದವರು. ಇದೀಗ ಮಾಲಿವುಡ್ನತ್ತ ನಟಿ ಮುಖ ಮಾಡಿದ್ದಾರೆ. ಯಕ್ಷಿಣಿ ಪಾತ್ರಕ್ಕೆ ಅನುಷ್ಕಾ ಜೀವ ತುಂಬಲಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ? ಇಲ್ಲಿದೆ ಮಾಹಿತಿ.
Advertisement
ಅನುಷ್ಕಾ ಶೆಟ್ಟಿ ಇದೀಗ ಮೊದಲ ಬಾರಿಗೆ ಮಲಯಾಳಂ (Mollywood) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂ ಚಿತ್ರರಂಗದ ರೋಜಿನ್ ಥಾಮಸ್ ನಿರ್ದೇಶನದ ಹಾರರ್ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:ವರ್ತೂರು ಸಂತೋಷ್ ಹುಟ್ಟುಹಬ್ಬ: ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆ
Advertisement
Advertisement
ಚಿತ್ರದಲ್ಲಿ ‘ಕಲಿಯಂಕಟ್ಟು ನೀಲಿ’ ಎಂಬ ಕೇರಳದ ಜನಪದ ಕತೆಗಳಲ್ಲಿ ಬರುವ ಯಕ್ಷಿಣಿ ಅಥವಾ ಆತ್ಮದ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಸಿನಿಮಾವು ಒಬ್ಬ ಮಾಂತ್ರಿಕ- ದೆವ್ವದ ನಡುವೆ ನಡೆಯುವ ಕತೆಯಾಗಿದೆ.
Advertisement
ಹಾರರ್ ಸಿನಿಮಾ ಆಗಿದ್ದರೂ ಸಹ ಭರ್ಜರಿಯಾದ ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಈ ಸಿನಿಮಾದಲ್ಲಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಅನುಷ್ಕಾ ಪಾತ್ರಕ್ಕೆ ಪ್ರಾಧಾನ್ಯತೆಯಿದೆ. ಚಿತ್ರದ ಕತೆ ವಿಭಿನ್ನ ಎಂದು ಅನಿಸಿದಕ್ಕೆ ಅನುಷ್ಕಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಲು ಓಕೆ ಎಂದಿದ್ದಾರೆ.
ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರದ ಸಕ್ಸಸ್ ನಂತರ ಇದೀಗ ಪ್ರಭಾಸ್ ನಿರ್ಮಾಣ ಸಂಸ್ಥೆಯ ಸಿನಿಮಾವೊಂದರಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ತೆಲುಗು ಸಿನಿಮಾಗಳ ಜೊತೆಗೆ ಮಾಲಿವುಡ್ ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.