ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಎರಡು ವರ್ಷಕೊಮ್ಮೆ ಸಿನಿಮಾ ಮಾಡಿದ್ರೂ ಅವರ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಇದೀಗ ಅವರ ಬಗ್ಗೆ ಇಂಟ್ರಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ನಗುವಿನ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ‘ಬಾಹುಬಲಿ’ (Bahubali) ನಟಿ. ಹಾಗಂತ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಮೈಸೂರಿನಲ್ಲಿ ‘ಕೋಟಿ’ ವೀಕ್ಷಿಸಲಿದ್ದಾರೆ ಪ್ರತಾಪ್ ಸಿಂಹ
ನಗುವಿನ ಕಾಯಿಲೆ ಅದೇನು ದೊಡ್ಡ ಸಮಸ್ಯೆಯಲ್ಲ. ಅದರಿಂದ ಅನೇಕ ಮುಜುಗರಕ್ಕೆ ಒಳಗಾಗಿದ್ದು ಇದೆ. ಅನುಷ್ಕಾ ಒಮ್ಮೆ ನಗಲು ಶುರು ಮಾಡಿದರೆ ನಿಲ್ಲಿಸಲು ಬಹಳ ಸಮಯ ತೆಗೆದುಕೊಳ್ತಾರೆ. ಇದರಿಂದ ಶೂಟಿಂಗ್ ವೇಳೆ ಮುಜುಗರ ಎದುರಿಸಿದ್ದು ಇದೆ ಎಂದು ನಟಿ ಮಾತನಾಡಿದ್ದಾರೆ.
ಒಮ್ಮೊಮ್ಮೆ ನೆಲದ ಮೇಲೆ ಬಿದ್ದು ಸಹ ನಗುವುದಿದೆಯಂತೆ. ಇದರಿಂದ ಶೂಟಿಂಗ್ ನಿಲ್ಲಿಸಲಾಗಿದೆಯಂತೆ. ಯಾವುದಾದರೂ ಕಾಮಿಡಿ ಸೀನ್ ಚಿತ್ರೀಕರಣ ಮಾಡಬೇಕಾದರೆ ಪಳ್ಳನೆ ನಗು ಬಂದು ಬಿಡುತ್ತಿತ್ತಂತೆ. 15-20 ನಿಮಿಷಗಳ ಕಾಲ ನಗು ಕಂಟ್ರೋಲ್‌ಗೆ ಬರುತ್ತಿರಲಿಲ್ಲವಂತೆ. ಆ ನಂತರ ಅನುಷ್ಕಾರ ಈ ಸಮಸ್ಯೆ ತಮ್ಮ ಅನುಕೂಲಕ್ಕೂ ಚಿತ್ರತಂಡ ಬಳಸಿಕೊಂಡಿದ್ದು ಇದೆ. ಅವರಿಗೆ ಬ್ರೇಕ್ ಬೇಕಾದಾಗ ನಗಿಸಿ ಬಿಡುತ್ತಿದ್ದರಂತೆ. ಆ ನಂತರ ಸಿನಿಮಾ ಶೂಟಿಂಗ್ ಶುರು ಮಾಡುತ್ತಿದ್ದರಂತೆ.
ಕಳೆದ ವರ್ಷ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಇದೀಗ ತೆಲುಗಿನ ‘ಘಾಟಿ’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. ಜೊತೆಗೆ ಮಾಲಿವುಡ್‌ನಲ್ಲಿ ‘ಕಥನಾರ್’ ಸಿನಿಮಾದಲ್ಲಿಯೂ ಕಾಣಿಸಿಕೊಳ್ತಿದ್ದಾರೆ. ಪ್ರಮುಖ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.