ಚಿತ್ರರಂಗದಲ್ಲಿ ಇತ್ತೀಚೆಗೆ ನಟಿಯರ ಮೇಲೆ ಸಾಕಷ್ಟು ದೌರ್ಜನ್ಯ ಪ್ರಕರಣಗಳು ಕೇಳಿಬರುತ್ತಿದೆ. ಇದೀಗ ಮಲಯಾಳಂ ನಟಿ(Mollywood Actress) ಅನ್ನಾ ರಾಜನ್(Anna Rajan) ಇಂತಹದ್ದೇ ಸಂಕಷ್ಟ ಎದುರಾಗಿದೆ. ಸಿಮ್ ಖರೀದಿಸಲು ಬಂದ ನಟಿಯನ್ನೇ ಶೋ ರೂಮ್ ಸಿಬ್ಬಂದಿ ಕೂಡಿ ಹಾಕಿದ್ದಾರೆ.
View this post on Instagram
Advertisement
`ಅಂಗಮಾಲಿ ಡೈರೀಸ್’ ಚಿತ್ರದ ಮೂಲಕ ಮಾಲಿವುಡ್ಗೆ ಅನ್ನಾ ರಾಜನ್ ಪಾದಾರ್ಪಣೆ ಆಗಿದ್ದರು. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಅನ್ನಾ ರಾಜನ್ ಇದೀಗ ಸುದ್ದಿಯಲ್ಲಿದ್ದಾರೆ. ಸಿಮ್ ಖರೀದಿಸಲು ಹೋಗಿದ್ದ ನಟಿಗೆ ಖಾಸಗಿ ಟೆಲಿಕಾಂ ಕಂಪನಿಯ ಸಿಬ್ಬಂದಿಯೊಬ್ಬರು ಶೋ ರೂಮ್ನಲ್ಲಿ ಕೂಡಿ ಹಾಕಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ. ಇದನ್ನೂ ಓದಿ:ರಶ್ಮಿಕಾ- ವಿಜಯ್ ದೇವರಕೊಂಡ ಜೋಡಿಯನ್ನು ಮತ್ತೆ ಬೆಸೆದ ‘ಲೈಗರ್’ ಸೋಲು
Advertisement
View this post on Instagram
Advertisement
ಡುಬ್ಲಿಕೇಟ್ ಸಿಮ್ ಖರೀದಿಸಲು ಹೋಗಿದ್ದ ವೇಳೆ ನಟಿ ಅನ್ನಾ ರಾಜನ್ ಜೊತೆ ಸಿಬ್ಬಂದಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಶೋ ರೂಮ್ನ ಶಟರ್ ಎಳೆದು ಕೂಡಿ ಹಾಕಿದ್ದಾರೆ. ಈ ಕುರಿತು ನಟಿ ದೂರು ದಾಖಲಿಸಿದ್ದಾರೆ. ಈ ದೂರಿನ ಬಳಿಕ ಅಲುವಾ ಪೊಲೀಸ್ ಠಾಣೆಗೆ ಸಿಬ್ಬಂದಿಯನ್ನ ಕರೆಸಿದ ಬಳಿಕ ನಟಿಯ ಬಳಿ ಕ್ಷಮೆಯಾಚಿಸಿದ್ದಾನೆ. ಸಿಬ್ಬಂದಿಯ ಭವಿಷ್ಯ ದೃಷ್ಟಿಯಿಂದ ನಟಿ ಅನ್ನಾ ರಾಜನ್ ಈ ಪ್ರಕರಣವನ್ನು ಕೈಬಿಟ್ಟಿದ್ದಾರೆ.