ಬೆಂಗಳೂರು: ನಾಥೂರಾಮ್ ಗೋಡ್ಸೆ ಮತ್ತು ಬ್ರಾಹ್ಮಣರ ಬಗ್ಗೆ ಚಂದನವನದ ನಟಿ ಅನಿತಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಬಿಗ್‍ಬಾಸ್ ಕನ್ನಡ ಸ್ಪರ್ಧಿ ಅನಿತಾ ಭಟ್ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಬ್ರಾಹ್ಮಣ್ಯ ಮತ್ತು ಗಾಂಧೀಜಿಯನ್ನು ಕೊಂದ ಗೋಡ್ಸೆಗೆ ಜೈ ಎಂದು ಟ್ವೀಟ್ ಮಾಡಿದ್ದಾರೆ. ಈಗ ಈ ವಿಚಾರ ಪರ, ವಿರೋಧ ಚರ್ಚೆ ಆಗುತ್ತಿದೆ.
Advertisement
ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಅಂತ ಗೊತ್ತಿದ್ರೂ, ಅದನ್ನ ಮಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ. https://t.co/ifOYhMpCsh
— Anita Bhat (@IamAnitaBhat) August 17, 2021
Advertisement
ಟ್ವೀಟ್‍ನಲ್ಲಿ ಏನಿದೆ?
ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಾಮೆಂಟ್ ಮಾಡಿದ್ದಾರೆ.
Advertisement
ನಟಿ ಮುಂದುವರೆದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?
Advertisement
Educated people could take proper steps towards this Sir. ನನ್ನ ಅಮ್ಮ ಎಷ್ಟೋ ವರ್ಷಗಳ ಹಿಂದೇನೆ ಜಾತಿ ಪದ್ದತಿಯನ್ನ ದೂರ ಇಟ್ಟಿದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೇ ದೇವರ ಪೂಜೆ ಕೂಡ ಮಾಡಿದಾಳೆ. ನನಗೆ ಇದರಲ್ಲಿ ವಿಶೇಷತೆ ಏನು ಕಂಡಿಲ್ಲ. ಸಂದರ್ಭ ಬಂದಿದ್ದರಿಂದ ಹೇಳಿದೆ ಅಷ್ಟೇ. https://t.co/1WWj5bIBXV
— Anita Bhat (@IamAnitaBhat) August 17, 2021
ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದಾರೆ.
ಇವರುಗಳು ತಮ್ಮ ಪದವಿ ಮುಂದೆ ಜಾತಿ ಹೆಸರು ಹಾಕಿದ ಹಾಗೆ ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದಿನ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ
— Anita Bhat (@IamAnitaBhat) August 17, 2021
ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ
ಸೋಶಿಯಲ್ ಮೀಡಿಯಾದಲ್ಲಿ ಬ್ರಾಹ್ಮಣ್ಯದ ಕುರಿತು ಮಾತನಾಡಿದ ಅವರು, ಇವರುಗಳು ತಮ್ಮ ಪದವಿ ಮುಂದೆ ಜಾತಿ ಹೆಸರು ಹಾಕಿದ ಹಾಗೆ ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದ್ದೇನಾ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ನನಗೆ ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ. ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ? ಬೇರೆ ಜಾತಿಯವರೂ ಮಾಡ್ತಾರೆ ಅಂದ್ರೆ ಅವರವರ ಜಾತಿ ಹೆಸರು ಹಾಕಿ. ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಕೊಂಡು ಕೂತಿದ್ದಾರೆ, ಅದಕ್ಕೆ ಬೇಕಾಬಿಟ್ಟಿ ಮಾತಾಡ್ತಾರೆ. ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್
ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ ? ಬೇರೆ ಜಾತಿಯವರೂ ಮಾಡ್ತಾರೆ ಅಂದ್ರೆ ಅವರವರ ಜಾತಿ ಹೆಸರು ಹಾಕಿ. ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಕೊಂಡು ಕೂತಿದಾರೆ , ಅದಕ್ಕೆ ಬೇಕಾಬಿಟ್ಟಿ ಮಾತಾಡ್ತಾರೆ.. ಅಷ್ಟೇ https://t.co/alioatVR8A
— Anita Bhat (@IamAnitaBhat) August 17, 2021
ಅದಕ್ಕೆ ಒಬ್ಬ ನೆಟ್ಟಿಗ, ತಾವೇ ಸರ್ವಶ್ರೇಷ್ಠರು ಅನ್ನೋ ವಾದ, ಮಡಿವಂತಿಕೆ ಆಚರಣೆಗಳು ಇದೆಯಲ್ಲ ಅದೇ ಬ್ರಾಹ್ಮಣ್ಯ. ಅದಕ್ಕೆ ಎಲ್ಲರ ವಿರೋಧ ಅಷ್ಟೇ. ಅದು ಬಿಟ್ಟರೆ ಎಲ್ಲರೂ ಒಂದೇ ಯಾರು ಸಹ ಮೇಲಿಲ್ಲ ಕೀಳಿಲ್ಲ. ಎಂದು ಕಾಮೆಂಟ್ ಮಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಯವರು ದೇಶಭಕ್ತನೇ. ಅವರನ್ನ terrorist ಅಂತ ಕರಿಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿನಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು..
— Anita Bhat (@IamAnitaBhat) August 17, 2021
ನನ್ನ ಅಮ್ಮ ಎಷ್ಟೋ ವರ್ಷಗಳ ಹಿಂದೇನೆ ಜಾತಿ ಪದ್ದತಿಯನ್ನ ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೇ ದೇವರ ಪೂಜೆ ಕೂಡ ಮಾಡಿದ್ದಾಳೆ. ನನಗೆ ಇದರಲ್ಲಿ ವಿಶೇಷತೆ ಏನು ಕಂಡಿಲ್ಲ. ಸಂದರ್ಭ ಬಂದಿದ್ದರಿಂದ ಹೇಳಿದೆ ಅಷ್ಟೇ ಎಂದು ಅದಕ್ಕೆ ಉತ್ತರಿಸಿದ್ದಾರೆ.
My twitter, my post according to my opinion. Your dirty comments won't change my opinion. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಸ್ಟೊತ್ತಿಗೆ. ಎಷ್ಟು ಬೇಕಾದ್ರು ಗಂಟಲು ಹರ್ಕೊಳಿ ಹೋಗಿ .. ????
— Anita Bhat (@IamAnitaBhat) August 17, 2021
ಅನಿತಾ ಭಟ್, 2008ರಲ್ಲಿ ಬಿಡುಗಡೆ ಆದ ‘ಸೈಕೊ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟದ್ದಾರೆ. ನಂತರ ‘ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ’, ‘ದೊಡ್ಮನೆ ಹುಡ್ಗಾ’, ‘ಟಗರು'(ಡಾಲಿ ಗರ್ಲ್‍ಫ್ರೆಂಡ್ ಪಾತ್ರ), ‘ಹೊಸ ಕ್ಲೈಮ್ಯಾಕ್ಸ್’, ‘ಡಿಎನ್‍ಎ’, ‘ಕನ್ನೇರಿ’, ‘ಕಲಿವೀರ’, ‘ಬೆಂಗಳೂರು-69’, ‘ಬಳೆಪೇಟೆ’, ‘ಜೂಟಾಟ’, ತೆಲುಗಿನ ‘ಕೃಷ್ಣ ಲಂಕಾ’ ಸಿನಿಮಾ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈ ಕೆಲವೊಬ್ಬರಿಗೆ ಬ್ರಾಹ್ಮಣ ದ್ವೇಷ ಯಾಕೆ ಅಂತ ಗೊತ್ತಾಗ್ತಿಲ್ಲ. ಕೆಟ್ಟ ಮನಃಸ್ಥಿತಿಯ ವ್ಯಕ್ತಿಗಳು ಎಲ್ಲ ವರ್ಗದಲ್ಲೂ,ಎಲ್ಲ ಸಮುದಾಯದಲ್ಲೂ ಇರ್ತಾರೆ. ಹಾಗೆ ಒಳ್ಳೆ ಮನಸ್ಸಿರುವವರು ಕೂಡ. ಹೀಗಿರುವಾಗ ಬ್ರಾಹ್ಮಣರನ್ನು ಮಾತ್ರ target ಮಾಡೋ ಪ್ರಮೇಯ ಏನು? @chandu_crazy_ @Am_Chakravarthy appreciate you for taking stand for this
— Anita Bhat (@IamAnitaBhat) August 14, 2021