ರಂಗಭೂಮಿ ಕಲಾವಿದೆ, ನಟಿ ಮಮತಾ ಗೂಡೂರ (Mamatha Guduru) ಅವರು ಆಗಸ್ಟ್ 3ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದಾರೆ. 75ನೇ ವಯಸ್ಸಿಗೆ ಇಹಲೋಕ ತ್ಯಜಿಸಿರೋ ಕಲಾವಿದೆ ಮಮತಾಗೆ ಆಪ್ತರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:‘ಭರಾಟೆ’ ಬ್ಯೂಟಿಯ ಲೀಲೆಗೆ ಟಾಲಿವುಡ್ ಮಂದಿ ಬೋಲ್ಡ್
ನಟಿ ಮಮತಾ ಗೂಡೂರ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಹಾಗಾಗಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಇಂದು (ಆಗಸ್ಟ್ 3)ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಮತಾ ಇಹಲೋಕ ತ್ಯಜಿಸಿದರು. ಅವರ ನಿಸ್ವಾರ್ಥ ಕಲಾಸೇವೆಗೆ ನಟನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಬಾಗಲಕೋಟೆಯ ಇಳಕಲ್ ತಾಲ್ಲೂಕಿನ ಗೂಡೂರ ಗ್ರಾಮದವರಾಗಿದ್ದಾರೆ.
Advertisement
ಮಮತಾ ಅವರು 2 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. 20 ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ (Sandalwood) ನಟರಾದ ಅಂಬರೀಷ್ (Ambareesh), ವಜ್ರಮುನಿ (Vajramuni)ಸೇರಿ ಅನೇಕರ ಜೊತೆ ಮಮತಾ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದರು. ರಂಗಭೂಮಿ ನಾಟಕಗಳಲ್ಲಿ ಮಮತಾ ಆಕ್ಟೀವ್ ಆಗಿದ್ದರು.
Advertisement