ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ (Vijay Devarakonda) ಮೇಲೆ ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ಗುರುತರ ಆರೋಪ ಮಾಡಿದ್ದಾರೆ. ಹಲವು ವರ್ಷಗಳಿಂದಲೂ ಈ ಇಬ್ಬರ ಮಧ್ಯ ಮುಸುಕಿನ ಗುದ್ದಾಟವಿದ್ದು, ಆಗಾಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅದನ್ನು ಹೊರಹಾಕುತ್ತಾರೆ. ಈ ಬಾರಿಯೂ ಒಂದು ಆರೋಪದೊಂದಿಗೆ ವಿಜಯ್ ಮೇಲೆ ಮುಗಿಬಿದ್ದಿದ್ದಾರೆ ಅನಸೂಯಾ.
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸಖತ್ ಟ್ರೋಲ್ (troll) ಆಗುತ್ತಿರುವ ನಟಿ ಅನಸೂಯಾ. ಸಲ್ಲದ ಕಾರಣಕ್ಕಾಗಿ ಇವರು ಟ್ರೋಲ್ ಆಗುತ್ತಿದ್ದಾರೆ. ಅಲ್ಲದೇ, ಬೋಲ್ಡ್ ಫೋಟೋಗಳನ್ನು ಸಾಕಷ್ಟು ಹರಿದಾಡುತ್ತಿವೆ. ಇದಕ್ಕೆ ಕಾರಣ ವಿಜಯ್ ದೇವರಕೊಂಡ ಕಡೆಯವರು ಎನ್ನುವ ಆರೋಪ ಅವರದ್ದು. ವಿಜಯ್ ಆತ್ಮೀಯರೇ ದುಡ್ಡುಕೊಟ್ಟು ಟ್ರೋಲ್ ಮಾಡಿಸುತ್ತಿದ್ದಾರೆ ಎನ್ನುವುದು ಅವರ ಆರೋಪ.
ಸದ್ಯ ಅನಸೂಯಾ ಭಾರದ್ವಾಜ್ (Anasuya Bharadwaj) ಪತಿ ಜೊತೆ ಥೈಲ್ಯಾಂಡ್‌ನಲ್ಲಿದ್ದಾರೆ. ಪತಿಗೆ ಲಿಪ್‌ಕಿಸ್ ಮಾಡಿರುವ ರೊಮ್ಯಾಂಟಿಕ್ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನಟಿಯ ಮೋಜು- ಮಸ್ತಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಕೇಸರಿ ಸೀರೆಯುಟ್ಟ ರಮ್ಯಾ ಫೋಟೋ ವೈರಲ್
‘ಪುಷ್ಪ’ ನಟಿ ಅನಸೂಯಾ ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಿನಿಮಾ ಶೂಟಿಂಗ್, ನಿರೂಪಣೆಗೆ ಬ್ರೇಕ್ ಹಾಕಿ ಥೈಲ್ಯಾಂಡ್‌ಗೆ ಹಾರಿದ್ದಾರೆ. ತಮ್ಮ 13ನೇ ವೆಡ್ಡಿಂಗ್ ಆನಿವರ್ಸರಿಗೆ ದೂರ ದೇಶಕ್ಕೆ ಹೋಗಿದ್ದಾರೆ. ಅಲ್ಲಿ ಪತಿ ಸುಸಾಂಕ್ ಜೊತೆ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಪ್ರವಾಸದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ, ನಿರೂಪಕಿ ಅನಸೂಯಾ ಲಿಪ್‌ಕಿಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಒಟ್ನಲ್ಲಿ ಅನಸೂಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ (Pushpa) ಚಿತ್ರದಲ್ಲಿ ಅನಸೂಯಾ ಖಡಕ್ ಆಗಿ ನಟಿಸಿದ್ದರು. ಪುಷ್ಪ ಪಾರ್ಟ್ 2ನಲ್ಲಿ ಅವರು ನಟಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.