ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ ನ ಲೈಗರ್ ಸಿನಿಮಾದ ಪೋಟೋವೊಂದನ್ನು ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಜಯ್ ಸಂಪೂರ್ಣ ಬೆತ್ತಲಾಗಿ, ಖಾಸಗಿ ಅಂಗಕ್ಕೆ ಹೂಗುಚ್ಚವನ್ನಿಟ್ಟು ಮುಚ್ಚಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದ್ದು, ನಟಿ ಅನನ್ಯ ಪಾಂಡೆ ಸೇರಿದಂತೆ ಹಲವರು ಕಲಾವಿದರು ಕಾಮೆಂಟ್ ಮಾಡಿದ್ದಾರೆ. ಸಮಂತಾ, ಅನುಷ್ಕಾ ಶೆಟ್ಟಿ ಮತ್ತು ಕರಣ್ ಜೋಹರ್ ಕೂಡ ವಿಭಿನ್ನವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಸಮಂತಾ ಮತ್ತು ಕರಣ್ ಜೋಹಾರ್ ಗಿಂತಲೂ ಅನನ್ಯ ಪಾಂಡೆ ಮಾಡಿರುವ ಕಾಮೆಂಟ್ ನಾನಾ ರೀತಿಯ ಗಾಸಿಪ್ ಗೆ ಎಡೆಮಾಡಿ ಕೊಟ್ಟಿದೆ. ಈ ಹಿಂದೆ ವಿಜಯ್ ದೇವರಕೊಂಡ ಹೆಸರಿನ ಜೊತೆ ಕನ್ನಡತಿ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡಿತ್ತು. ಲೈಗರ್ ನಂತರ ವಿಜಯ್ ಜೊತೆ ಅನನ್ಯ ಪಾಂಡೆ ಓಡಾಡುತ್ತಿದ್ದಾರೆ ಎಂದು ಗಾಸಿಪ್ ಹರಡಿದೆ. ಈ ಕಾರಣಕ್ಕಾಗಿಯೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ದೂರವಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಅನನ್ಯ ಮಾಡಿರೋ ಕಾಮೆಂಟ್ ಗಮನ ಸೆಳೆದಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ
ವಿಜಯ್ ದೇವರಕೊಂಡ ಅವರ ಬೆತ್ತಲೆ ಫೋಟೋವನ್ನು ಶೇರ್ ಮಾಡಿರುವ ಅನನ್ಯ ಪಾಂಡೆ, ‘ ಬ್ರೀತ್ ಗಾಯ್ಸ್ ಬ್ರೀತ್, ದಿ ಟೆಂಪ್ರೆಚರ್ ಇಸ್ ರೇಸಿಂಗ್ ಆಲ್ ಓವರ್ ಇಂಡಿಯಾ ಟುಡೇ’ ಎಂದು ಬರೆದಿದ್ದಾರೆ. ಈ ಬೆತ್ತಲೆಯ ಫೋಟೋಗೆ ಭಾರತದಲ್ಲಿ ಇಂದು ತಾಪಮಾನ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಈ ಕಾಮೆಂಟ್ ಗೆ ಸಾಕಷ್ಟು ಜನರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.