ಬಾಲಿವುಡ್ (Bollywood) ಖ್ಯಾತ ನಟಿ ಅನನ್ಯ ಪಾಂಡ್ಯ (Ananya Pandey) ಕಾಸ್ಟ್ಯೂಮ್ (Costume) ವಿಷಯದಲ್ಲಿ ಪಕ್ಕಾ ಕಟ್ಟುನಿಟ್ಟು. ಅವರು ತಮಗಿಷ್ಟದ ಬಟ್ಟೆ ಹೊರತಾಗಿ ಬೇರೆ ಕಾಸ್ಟ್ಯೂಮ್ ಧರಿಸುವುದಿಲ್ಲ. ಈ ಕುರಿತಂತೆ ಹಲವಾರು ಬಾರಿ ಹೇಳಿದ್ದೂ ಇದೆ. ಇತರರಿಗೆ ಮುಜಗರ ಅನಿಸುವಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದಿಲ್ಲ ಎಂದು ಘೋಷಿಸಿ ಆಗಿದೆ. ಆದರೆ, ಎಲ್ಲರೂ ಅಚ್ಚರಿ ಪಡುವಂತಹ ಕಾಸ್ಟ್ಯೂಮ್ ಅನ್ನು ಅನನ್ಯ ಧರಿಸಿದ್ದಾರೆ.
ಎದೆಯ ಭಾಗವನ್ನು ಚಿಟ್ಟೆಯಿಂದ ಮುಚ್ಚಿಕೊಂಡಿರುವಂತಹ ಕಾಸ್ಟ್ಯೂಮ್ ಅದಾಗಿದ್ದು, ಎದೆ ಮೇಲಿನ ಚಿಟ್ಟೆ (Butterfly) ಕಂಡು ಹಲವರು ಹಲವು ರೀತಿಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿದ್ದರೆ, ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಈ ಚಿಟ್ಟೆ ಯಾಕೆ ಎಂದು ಕೇಳಲಾದ ಪ್ರಶ್ನೆಗೆ ಅನನ್ಯ ಸೊಗಸಾಗಿ ಉತ್ತರಿಸಿದ್ದಾರೆ.
ಅನನ್ಯ ಪಾಂಡೆ ಈ ಬಟ್ಟೆಯನ್ನು ಹಾಕಿದ್ದು ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ಶೋ ನಲ್ಲಿ. ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ರಾಹುಲ್ ಮಿಶ್ರಾ. ಪರಿಸರ ಮತ್ತು ಕೀಟಗಳ ಮೇಲಿನ ಪ್ರೀತಿಯಿಂದಾಗಿ ಇಂಥದ್ದೊಂದು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರಂತೆ ರಾಹುಲ್. ಅಳಿವಿನಂಚಿಗೆ ತಳ್ಳಿರುವ ಕೀಟಗಳನ್ನು ಉಳಿಸೋ ಜಾಗೃತಿ ಕೂಡ ಇದಾಗಿದೆಯಂತೆ.
ಪ್ರಾಣಿ, ಪಕ್ಷಿಗಳು ಹಾಗೂ ಕೀಟಗಳ ಬಗ್ಗೆ ಅನನ್ಯ ಯಾವಾಗಲೂ ಕಾಳಜಿ ತೋರಿಸುತ್ತಲೇ ಇರುತ್ತಾರೆ. ಈ ಬಾರಿ ಕಾಸ್ಟ್ಯೂಮ್ ಹಾಕುವ ಮೂಲಕ ಫ್ಯಾಷನ್ ವೇದಿಕೆಯ ಮೇಲೆ ಕಾಳಜಿ ಪ್ರದರ್ಶಿಸಿದ್ದಾರೆ.