ಬಾಲಿವುಡ್ ಬೆಡಗಿ ಆ್ಯಮಿ ಜಾಕ್ಸನ್ (Amy Jackson) ಅವರು ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಬಿಕಿನಿ ಧರಿಸಿ ಬೇಬಿ ಬಂಪ್ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:BBK 11: ಭವ್ಯಾಗೆ ಐ ಲವ್ ಯೂ ಪನ್ನಿ ಕುಟ್ಟಿ ಎಂದ ತ್ರಿವಿಕ್ರಮ್
ಕಳೆದ ವರ್ಷ ನಟ ಎಡ್ ವೆಸ್ಟ್‌ವಿಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆ್ಯಮಿ ಅವರು ಅಕ್ಟೋಬರ್‌ನಲ್ಲಿ ಪ್ರೆಗ್ನೆನ್ಸಿ ಬಗ್ಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದರು. ಈಗ ಬಿಕಿನಿ ಧರಿಸಿ ಬೋಲ್ಡ್ ಲುಕ್‌ನಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ. ನಟಿಯ ಲುಕ್‌ಗೆ ಫ್ಯಾನ್ಸ್ ಕಡೆಯಿಂದ ಬಗೆ ಬಗೆಯ ಕಾಮೆಂಟ್ಸ್ ಹರಿದು ಬರುತ್ತಿದೆ.
View this post on Instagram
ಅಂದಹಾಗೆ, 2015ರಲ್ಲಿ ಉದ್ಯಮಿ ಜಾರ್ಜ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರ ಪ್ರೀತಿಗೆ ಮಗುವೊಂದು ಸಾಕ್ಷಿಯಾಗಿತ್ತು. ಆದರೆ ಕೆಲ ಮನಸ್ತಾಪಗಳಿಂದ 2021ರಲ್ಲಿ ಅವರೊಂದಿಗೆ ನಟಿ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಗಂಡು ಮಗನನ್ನು ನಟಿಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಎಡ್ ವೆಸ್ಟ್‌ವಿಕ್ ಜೊತೆ ದಾಂಪತ್ಯ ಜೀವನದಲ್ಲಿ ಖುಷಿಯಾಗಿರುವ ನಟಿ ಮಗುವೊಂದು ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ.
ಇನ್ನೂ ಸುದೀಪ್ ಮತ್ತು ಶಿವಣ್ಣ ಜೊತೆ ‘ದಿ ವಿಲನ್’ ಸಿನಿಮಾದಲ್ಲಿ ಆ್ಯಮಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಕನ್ನಡಿಗರಿಗೆ ನಟಿ ಪರಿಚಿತರಾದರು.