Connect with us

Cinema

ಇಂದು ನಟಿ ಅಮೂಲ್ಯ ಮದರಂಗಿ ಶಾಸ್ತ್ರ- ಶಿಲ್ಪಾ-ಗಣೇಶ್ ಮನೆಯಲ್ಲಿ ಭರದ ಸಿದ್ಧತೆ

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಬೆಡಗಿ ಅಮೂಲ್ಯ ಮದುವೆ ಮಹೋತ್ಸವದ ತಯಾರಿ ಜೋರಾಗಿದೆ. ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ಅಮೂಲ್ಯ ಜಗದೀಶ್ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ.

ವಿವಾಹ ಕಾರ್ಯಕ್ರಮದ ಭಾಗವಾಗಿ ಇಂದು ಸಂಜೆ ಬೆಂಗಳೂರಲ್ಲಿರುವ ಶಿಲ್ಪಾ ಗಣೇಶ್ ಮನೆಯಲ್ಲಿ ಮದರಂಗಿ ಶಾಸ್ತ್ರ, ಅರಿಶಿಣ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ವಧು ಅಮೂಲ್ಯ ಮತ್ತು ವರ ಜಗದೀಶ್ ಮನೆಯಲ್ಲಿ ಚಪ್ಪರಶಾಸ್ತ್ರ, ಮನೆದೇವರ ಪೂಜೆ ಆಭರಣ ಮತ್ತು ವಸ್ತ್ರ ಪೂಜೆ ನಡೆಯಲಿದೆ. ಉತ್ತರ ಭಾರತದ ಶೈಲಿಯಲ್ಲಿ ಅಲಂಕಾರ ಮಾಡಲಾಗಿದೆ.

ಮದುವೆ ಸಮಾರಂಭಕ್ಕೆ ಹತ್ತಿರದ ಸಂಬಂಧಿಗಳು ಮತ್ತು ಸಿನಿಮಾ ಇಂಡಸ್ಟ್ರಿಯ ತೀರಾ ಆಪ್ತರನ್ನು ಆಹ್ವಾನಿಸಲಾಗಿದೆ. ಮೇ 16ಕ್ಕೆ ಬನಶಂಕರಿ ಬಳಿಯಿರುವ ಶ್ರೀಕನ್ವೆಂಷನಲ್ ಹಾಲ್‍ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಏರ್ಪಡಿಸಲಾಗಿದೆ.

 ಇದನ್ನೂ ಓದಿ: ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯಗೆ ಮೇ 12ಕ್ಕೆ ಮದುವೆ

https://www.youtube.com/watch?v=AOrsX8T6T8g

https://www.youtube.com/watch?v=kP4N2HRgDsA

https://www.youtube.com/watch?v=2vRFrJpvZNI

Click to comment

Leave a Reply

Your email address will not be published. Required fields are marked *