ನಟಿ ಅಮೂಲ್ಯ ಸಿನಿಮಾ ರಂಗದಿಂದ ದೂರವಿದ್ದರೂ, ಅಭಿಮಾನಿಗಳು ಮಾತ್ರ ಅವರನ್ನು ಮರೆತಿಲ್ಲ. ಹಾಗಾಗಿ ಅಮೂಲ್ಯ ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿ ಇರುತ್ತಾರೆ.
ದಿಢೀರ್ ಅಂತ ಸಿನಿಮಾ ರಂಗದಿಂದ ದೂರ ಉಳಿದು, ಅವರು ಮದುವೆ ಆಗುತ್ತಾರೆ ಅಂದಾಗ ಅದೆಷ್ಟೊ ಅಭಿಮಾನಿಗಳು ನೊಂದುಕೊಂಡಿದ್ದೂ ಇದೆ. ಹಾಗಾಗಿ ಅಭಿಮಾನಿಗಳ ಮೇಲೆ ಇವರಿಗೂ ವಿಶೇಷ ಪ್ರೀತಿ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ಮದುವೆ ನಂತರ ನಿರಂತರವಾಗಿ ಅಭಿಮಾನಿಗಳಿಗೆ ಒಂದಿಲ್ಲೊಂದು ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸುತ್ತಲೇ ಇರುವ ಅಮೂಲ್ಯ, ಈ ಬಾರಿ ತಮ್ಮ ಎರಡು ಮಕ್ಕಳ ಫೋಟೋವನ್ನು ಅಭಿಮಾನಿಗಳಿಗಾಗಿ ಅಪ್ ಲೋಡ್ ಮಾಡಿದ್ದಾರೆ. ಮೊದಲ ಬಾರಿಗೆ ಅವಳಿ ಮಕ್ಕಳ ಮುಖವನ್ನು ಅವರು ರಿವೀಲ್ ಮಾಡಿದ್ದಾರೆ.
ಮಗು ಜನಿಸಿದಾಗ ಮತ್ತು ಇತ್ತೀಚೆಗಷ್ಟೇ ತಮ್ಮ ಪುಟ್ಟ ಮಕ್ಕಳ ಬೆರಳು, ಕಾಲುಗಳನ್ನಷ್ಟೇ ತೋರಿಸಿದ್ದ ಅಮೂಲ್ಯ ದಂಪತಿ, ಈ ಬಾರಿ ಮುಖವನ್ನೂ ತೋರಿಸಿದ್ದಾರೆ. ನಮ್ಮ ಕಂದಮ್ಮಗಳಿಗೆ ನಿಮ್ಮ ಹಾರೈಕೆಗಳು ಇರಲಿ ಎಂದು ಕೇಳಿಕೊಂಡಿದ್ದಾರೆ.
ತಮ್ಮ ನೆಚ್ಚಿನ ನಟಿಯ ಮಕ್ಕಳನ್ನು ನೋಡಬೇಕು ಎನ್ನುವುದು ಅಮೂಲ್ಯ ಅಭಿಮಾನಿಗಳ ಆಸೆ ಆಗಿತ್ತು. ಅದನ್ನು ಈಗ ಅವರು ಈಡೇರಿಸಿದ್ದಾರೆ.