ಬೆಂಗಳೂರು: ನಟಿ ಅಮೂಲ್ಯ ಮದುವೆಯಾದ ನಂತರ ಚಿತ್ರರಂಗದಿಂದ ದೂರವಿದ್ದಾರೆ. ಆದರೂ ಸದಾ ಕಾಲ ಟ್ವಿಟ್ಟರ್, ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರು ಫೋಟೋ ಟ್ವೀಟ್ ಮಾಡಿದ್ದು, ಆ ಫೋಟೋಗೆ ಅಧಿಕ ಲೈಕ್ಸ್ ಬರುತ್ತಿದೆ.
ನಟಿ ಅಮೂಲ್ಯ ಅವರು ಜಗದೀಶ್ ಅವರನ್ನು 2017 ರಂದು ಮದುವೆಯಾಗಿದ್ದರು. ಅಂದಿನಿಂದಲೂ ಆಗಾಗ ಪತಿ, ಸ್ನೇಹಿತರ ಜೊತೆ ವಿದೇಶಕ್ಕೆ ಪ್ರಯಾಣ ಬೆಳಸುತ್ತಿರುತ್ತಾರೆ. ಇತ್ತೀಚೆಗಷ್ಟೆ ಅಮೂಲ್ಯ ತಮ್ಮ ಪತಿ ಜೊತೆ ವಿದೇಶಕ್ಕೆ ತೆರಳಿದ್ದರು. ಅಲ್ಲಿನ ಸುಂದರ ಸ್ಥಳಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.
ಈಗ ತಮ್ಮ ಜೀವನದ ಪ್ರತಿಯೊಂದು ಸಂತಸದ ಕ್ಷಣಗಳು ತುಂಬಾ ಮಹತ್ವದ್ದಾಗಿದ್ದು, ಅವು ನಮ್ಮ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿದುಕೊಳ್ಳುತ್ತದೆ ಎಂದು ಹೇಳುವ ಮೂಲಕ ತಮ್ಮ ಸಂತಸ ಸುಂದರ ಕ್ಷಣಗಳನ್ನು ಒಂದು ಹಾರ್ಟಿನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಅಮೂಲ್ಯ ಅವರು ಟ್ವೀಟ್ ಮಾಡಿರುವ ಒಂದು ಫೋಟೋ ನೂರಾರು ನೆನಪನ್ನು, ಖುಷಿಯನ್ನು ಹೇಳುತ್ತದೆ. ಅಮೂಲ್ಯ ತನ್ನ ಪತಿಯೊಂದಿಗಿನ ಸಂತಸದ ಕ್ಷಣದ, ಮದುವೆ ಫೋಟೋ, ಜೊತೆಗೆ ತಮ್ಮ ಹಾಗೂ ಪತಿ ಒಂದೊಂದು ಸುಂದರ ಫೋಟೋಗಳನ್ನು ಮುತ್ತುಗಳನ್ನು ಜೋಡಿಸಿ ಸರ ಮಾಡುವಂತೆ ಒಂದೆಡೆ ಸೇರಿಸಿದ್ದಾರೆ.
Life is all about cherishing each n every best moments … #couplesgoals #memories #roomdecor @Jagdish_RC ❤️ pic.twitter.com/HoFhyVK9UF
— Amulya (@nimmaamulya) March 2, 2019
ವಿಶೇಷ ಏನೆಂದರೆ ಮೊದಲಿಗೆ ಒಂದು ಗೋಡೆಯ ಮೇಲೆ ಹೃದಯಾಕಾರದಲ್ಲಿ ಡ್ರಾಯಿಂಗ್ ಸೀಟ್ ಹಾಕಿ ಅದಕ್ಕೆ ತಮ್ಮ ಸುಂದರ ಕ್ಷಣಗಳ ಫೋಟೋಗಳನ್ನು ಹೃದಯ ಶೇಪ್ ರೀತಿಯಲ್ಲಿ ಹಾಕಿದ್ದಾರೆ. ಈ ರೀತಿಯ ಡೆಕೋರೇಷನ್ ನನ್ನು ತಮ್ಮ ರೂಮಿನಲ್ಲಿ ಮಾಡಿಕೊಂಡಿದ್ದು, ಅದಕ್ಕೆ “ಜೀವನದ ಪ್ರತಿಯೊಂದು ಸಂತೋಷದ ಕ್ಷಣಗಳು ಅತ್ಯಾಮುಲ್ಯವಾದುದ್ದು” ಎಂದು ಬರೆದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv