ಚಿಕ್ಕಬಳ್ಳಾಪುರ: ವಿಶೇಷವಾಗಿ ವಿದ್ಯಾರ್ಥಿನಿಯರು ಆತ್ಮರಕ್ಷಣಾ ಕಲೆ ಸೇರಿದಂತೆ ಒಳ್ಳೆಯದನ್ನ ಕಲಿಯುವುದರಲ್ಲಿ ನಿರ್ಲಕ್ಷ ಮಾಡಬೇಡಿ. ಮುಂದೊಂದು ದಿನ ಯಾವುದೇ ಸಂದರ್ಭದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳುವ ಸಂದರ್ಭ ಬಂದಾಗ ಕರಾಟೆಯ ಮಹತ್ವ ಗೊತ್ತಾಗಲಿದೆ ಎಂದು ನಟಿ ಅಮೂಲ್ಯ ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ಮಿಷನ್ ಸಾಹಸಿ ಆತ್ಮ ರಕ್ಷಣೆಯ ಕಲೆಯ ಬಗ್ಗೆ ಶಿಬಿರ ಕಾರ್ಯಕ್ರಮ ನಡೆದಿದೆ. ಈ ತರಬೇತಿಯಲ್ಲಿ ನಟಿ ಅಮೂಲ್ಯ ಮತ್ತು ಮಹಿಳಾ ಕ್ರಿಕೆಟರ್ ತಮ್ಮ ಅನುಭವಗಳನ್ನು ಹೇಳಿ ಇನ್ನಿತರ ವಿದ್ಯಾರ್ಥಿನಿಯರು ತಮ್ಮ ಆತ್ಮರಕ್ಷಣೆಗೆ ಕರಾಟೆ ಕಲಿಯುವಂತೆ ಪ್ರೇರಣೆ ನೀಡಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮೀಟೂ ಬಗ್ಗೆ ಮಾತನಾಡಿದ ಅಮೂಲ್ಯ ಅವರು, ಮೀಟೂ ಬಗ್ಗೆ ನಾನು ಏನು ಹೇಳಲು ಇಷ್ಟಪಡುವುದಿಲ್ಲ. ಅವರವರ ದೃಷ್ಠಿಕೋನ ಬೇರೆ ಇರುತ್ತದೆ. ನನ್ನ ದೃಷ್ಠಿಕೋನವೇ ಬೇರೆ ಇರುತ್ತದೆ. ಆದ್ದರಿಂದ ಅದರ ಬಗ್ಗೆ ನಾನು ಹೇಳುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಇದೇ ವೇಳೆ ಆತ್ಮರಕ್ಷಣಾ ಕಲೆ ಬಗ್ಗೆ ಮಾತನಾಡಿ, ಪ್ರತಿಯೊಬ್ಬ ಹೆಣ್ಣು ಮಕ್ಕಳು ಕಲಿಯಬೇಕಾದ ಕಲೆ ಇದು. ಈ ಕಲೆ ನಿಮ್ಮ ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ. ನಾನು ಚಿಕ್ಕವಳಿದ್ದಾಗ ಭರತ ನಾಟ್ಯ ಕಲಿತೆ ಅದು ನನಗೆ ನಟನೆಯಲ್ಲಿ ಸಹಾಯವಾಯಿತು. ಅದೇ ರೀತಿ ನಿಮಗೂ ಈ ವಿದ್ಯೆ ಉಪಯೋಗವಾಗುತ್ತದೆ. ನೀವು ಬೇರೆಯವರನ್ನು ನಿಮ್ಮ ರಕ್ಷಣೆಗೆ ಹುಡುಕಿಕೊಂಡು ಹೋಗುದುವುದಕ್ಕಿಂತ ನೀವೇ ನಿಮ್ಮ ರಕ್ಷಣೆ ಮಾಡಿಕೊಳ್ಳುತ್ತೀರಿ ಎಂದು ಹೇಳಿದ್ದಾರೆ.
ತಾವು ದೇಶದಿಂದ ದೇಶಕ್ಕೆ ಒಬ್ಬಂಟಿಯಾಗಿ ಹೋಗುವಾಗ ಕರಾಟೆ ನನಗೆ ಆತ್ಮಸ್ಥೈರ್ಯ ನೀಡುತ್ತದೆ ಎಂದು ಇಂಡಿಯನ್ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಎ.ಬಿ.ವಿ.ಪಿ ಹಾಗೂ ಎಸ್.ಜೆ.ಸಿ.ಐ.ಟಿ ಕಾಲೇಜು ಆಡಳಿತ ಮಂಡಳಿ ಸಾಥ್ ನೀಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv