ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಅವರು ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಇದರ ನಡುವೆ ತಮ್ಮ ಪತಿ ಮತ್ತು ಅವಳಿ ಮಕ್ಕಳೊಂದಿಗೆ ಮಸ್ತ್ ಆಗಿ ಫೋಟೋಶೂಟ್ ಮಾಡಿದ್ದಾರೆ. ‘ಚೆಲುವಿನ ಚಿತ್ತಾರ’ (Cheluvina Chittara) ನಟಿಯ ಕುಟುಂಬದ ಸುಂದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಇದೀಗ ಪತಿ ಮತ್ತು ಅವಳಿ ಮಕ್ಕಳೊಂದಿಗೆ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಅವಳಿ ರಾಜಕುಮಾರರ ಜೊತೆ ರಾಜ ಮತ್ತು ರಾಣಿಯಾಗಿ ಅಮೂಲ್ಯ ದಂಪತಿ ಮಿಂಚಿದ್ದಾರೆ. ಇಬ್ಬರು ಮಕ್ಕಳು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಅಮೂಲ್ಯ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಜಗದೀಶ್ ಬಿಳಿ ಬಣ್ಣ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಫೋಟೋಶೂಟ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದ್ದ ನಟಿ ಅಮೂಲ್ಯ ಅವರು ಅಪ್ಪಟ ಗೃಹಿಣಿಯಾಗಿ ಕುಟುಂಬದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅದರಲ್ಲೂ ಅವಳಿ ಮಕ್ಕಳು ಆದ್ಮೇಲಂತೂ ಮತ್ತಷ್ಟು ನಟಿ ಬ್ಯುಸಿಯಾದರು. ಈಗ ಮತ್ತೆ ತಮ್ಮ ಕೆರಿಯರ್ ಕಡೆ ನಟಿ ಮುಖ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ಪಕ್ಷಕ್ಕೆ ಸೇರಿಕೊಳ್ತಾರಾ ನಟ ಸಮುದ್ರಕನಿ?
View this post on Instagram
ಸದ್ಯ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಮುಂಬರುವ ಸಿನಿಮಾದಲ್ಲಿ ಅಮೂಲ್ಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೊಸ ಕಥೆ, ಹೊಸ ಬಗೆಯ ಪಾತ್ರದ ಮೂಲಕ ಬರಲು ತಯಾರಿ ಮಾಡಿಕೊಂಡಿದ್ದಾರೆ.
ಅಭಿಮಾನಿಗಳ ಆಸೆಯಂತೆ ಮತ್ತೆ ನಾಯಕಿಯಾಗಿ ಬರುತ್ತಿರುವ ಅಮೂಲ್ಯ ಜಿಮ್‌ನಲ್ಲಿ ವರ್ಕೌಟ್ ಮಾಡಿ, ಬ್ಯೂಟಿ ಮತ್ತು ಫಿಟ್‌ನೆಸ್ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮದುವೆಯಾಗಿ 2 ಮಕ್ಕಳ ತಾಯಿಯಾಗಿದ್ದರೂ ಕೂಡ ಸಂತೂರ್ ಮಮ್ಮಿಯಂತೆ ಮಿಂಚ್ತಿದ್ದಾರೆ. ಯಾವ ನಾಯಕಿಯರಿಗೂ ಕಮ್ಮಿಯಿಲ್ಲ ಈ ಅಮೂಲ್ಯ.