Bengaluru City
ಚೆಲುವಿನ ಚಿತ್ತಾರದ ಬೆಡಗಿಗೆ ಬರ್ತ್ಡೇ ಸಂಭ್ರಮ- ಚುಂಚನಗಿರಿಗೆ ಇಂದು ಭೇಟಿ

ಬೆಂಗಳೂರು: ಕಳೆದ ಮೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ಗೋಲ್ಡನ್ ಗರ್ಲ್ ಅಮೂಲ್ಯಗೆ ಇಂದು 24ನೇ ಜನ್ಮದಿನದ ಸಂಭ್ರಮ.
ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ `ಚೆಲುವಿನ ಚಿತ್ತಾರ’ ಸಿನಿಮಾದ ಮೂಲಕ ನಾಯಕಿಯಾಗಿ ಕರುನಾಡಿನ ಮನೆಮಗಳಾದ್ರು. 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಮೂಲ್ಯ, ಸದ್ಯ ವಿವಾಹ ಬಂಧನದಲ್ಲಿ ಬೆಚ್ಚಗಿದ್ದಾರೆ. ಇಂದು ಅವರ ಜನ್ಮದಿನದ ಪ್ರಯುಕ್ತ ನಾಗಮಂಗಲದ ಆದಿಚುಂಚನಗಿರಿಗೆ ಬೆಳಗ್ಗೆ 11ಗಂಟೆಗೆ ಭೇಟಿ ನೀಡಲಿದ್ದಾರೆ.
ಅಮೂಲ್ಯ ಅವರ ಮದುವೆ ಕೂಡ ಆದಿಚುಂಚನಗಿರಿಯಲ್ಲೇ ನಡೆದಿತ್ತು. ಈಗ ತಮ್ಮ ಹುಟ್ಟುಹಬ್ಬವನ್ನ ಕೂಡ ಆದಿಚುಂಚನಗರಿಯ ಕಾಲಭೈರವನ ಸನ್ನಿಧಿಯಲ್ಲಿ ಆಚರಿಸಿಕೊಳ್ಳುತ್ತಿರುವುದು ವಿಶೇಷ.
