CinemaKarnatakaLatestMain PostSandalwood

ಪುಸ್ತಕಗಳ ಮಧ್ಯ ತಮ್ಮ ಪುಟಾಣಿ ಮಕ್ಕಳ ಮಲಗಿಸಿ ‘ಹ್ಯಾಪಿ ಗಣೇಶ’ ಎಂದ ನಟಿ ಅಮೂಲ್ಯ

ಣೇಶನನ್ನು ವಿದ್ಯೆವಿನಾಯಕ ಅಂತಾನೂ ಕರೆಯುತ್ತಾರೆ. ವಿದ್ಯೆಗೆ ಅಧಿಪತಿ ವಿನಾಯಕ ಎನ್ನುವುದು ವಾಡಿಕೆ. ಹಾಗಾಗಿ ಗಣೇಶ ಹಬ್ಬದ ದಿನದಂದು ತಮ್ಮಿಬ್ಬರ ಮಕ್ಕಳ ಸುತ್ತಲೂ ಪುಸ್ತಕಗಳನ್ನು ಇಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ ನಟಿ ಅಮೂಲ್ಯ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

ಮೊನ್ನೆಯಷ್ಟೇ ತಮ್ಮ ಎರಡು ಪುಟಾಣಿ ಮಕ್ಕಳ ವಿಶೇಷ ಫೋಟೋ ಶೂಟ್ ಮಾಡಿಸಿದ್ದರು ಅಮೂಲ್ಯ. ಅವಳಿ ಜವಳಿ ಮಕ್ಕಳ ಫೋಟೋ ಶೂಟ್ ಗೆ ಒಂದು ಕಾನ್ಸೆಪ್ಟ್ ಕೂಡ ಮಾಡಿದ್ದಾರೆ. ಪತಿ ಜಗದೀಶ್ ಮತ್ತು ಅಮೂಲ್ಯ ಇಬ್ಬರೂ ಮಕ್ಕಳ ಜೊತೆಗೆ ಮಕ್ಕಳಂತೆಯೇ ಕ್ಯೂಟ್ ಆಗಿ ಕಂಡಿದ್ದರು. ಆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಪುಟಾಣಿ ಮಕ್ಕಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದರು. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

ಈಗ ಗಣೇಶ ಹಬ್ಬಕಾಗಿ ವಿಶೇಷ ಫೋಟೋ ಶೂಟ್ ಮಾಡಿಸಿದ್ದು, ವಿದ್ಯೆ ವಿನಾಯಕನನ್ನು ತಮ್ಮ ಮಕ್ಕಳು ಮೂಲಕ ನೆನೆದಿದ್ದಾರೆ ಅಮೂಲ್ಯ. ತಮ್ಮ ಮಕ್ಕಳ ಮೇಲೆ ಎಲ್ಲರ ಪ್ರೀತಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಸಿನಿಮಾ ರಂಗದಿಂದ ಸದ್ಯ ದೂರವಾಗಿರುವ ಅಮೂಲ್ಯ, ಮಕ್ಕಳೊಂದಿಗೆ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

Live Tv

Leave a Reply

Your email address will not be published.

Back to top button