ನೀರಿನ ಮಧ್ಯೆ ಹೂವಿನ ಉಯ್ಯಾಲೆಯಲ್ಲಿ ಕುಳಿತು ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್

Public TV
1 Min Read
Amulya 5

ಬೆಂಗಳೂರು: ಸ್ಯಾಂಡಲ್‍ವುಡ್‍ನ ಗೋಲ್ಡನ್ ಕ್ವೀನ್ ಅಮೂಲ್ಯ ತಾಯಿ ಆಗುತ್ತಿರುವ ವಿಚಾರ ತಿಳಿದಿದೆ. ಸೀಮಂತವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದ ಅಮೂಲ್ಯ ಅವರು ಇದೀಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.

ಅಮೂಲ್ಯ ಅವರು ಪತಿ ಜಗದೀಶ್ ಜೊತೆ ಬೇಬಿ ಶವರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೀಲಿ ಬಣ್ಣದ ಡ್ರೆಸ್ ಧರಿಸಿ, ನೀರಿನ ನಡುವೆ ಹೂವಿನ ಉಯ್ಯಾಲೆಯ ಮೇಲೆ ಕುಳಿತು ಅಮೂಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಸುಂದರವಾದ ಫೋಟೋಗಳು ಅಭಿಮಾನಿಗಳಿಗೂ ತುಂಬಾ ಇಷ್ಟವಾಗಿದೆ. ಜ್ಯೂನಿಯರ್ ಅಮೂಲ್ಯರನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

ಇತ್ತೀಚೆಗಷ್ಟೇ ತಾವು ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ನಟಿ ಅಮೂಲ್ಯ ಶೇರ್ ಮಾಡಿಕೊಂಡಿದ್ದರು. ಪತಿ ಜಗದೀಶ್ ಜೊತೆ ಫೋಟೋಶೂಟ್ ಮಾಡಿಸಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಬರೆದುಕೊಂಡಿದ್ದರು. ಅಭಿಮಾನಿಗಳು. ಸ್ನೇಹಿತರು, ಕಲಾವಿದರು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರಿದ್ದರು.

Amulya 1 1

ಅಮೂಲ್ಯ ಅವರು ಹೊಸದಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಅಮೂಲ್ಯ ಅವರ ಸೀಮಂತ ಶಾಸ್ತ್ರ ನಡೆಯಿತು ಪತಿ ಜಗದೀಶ್ ಮತ್ತು ಅಮೂಲ್ಯ ಅವರ ಇಡೀ ಕುಟುಂಬದವರು ಸೀಮಂತ ಶಾಸ್ತ್ರದಲ್ಲಿ ಹಾಜರಿದ್ದರು.

ಬಾಲನಟಿಯಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿದ್ದಾರೆ ಅಮೂಲ್ಯ. ಮದುವೆ ನಂತರ ನಟನೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಇದೀಗ ಅಮೂಲ್ಯ ತಾವು ತಾಯಿ ಆಗುತ್ತಿರುವ ಕ್ಷಣಗಳಿಗೆ ಎದುರು ನೋಡುತ್ತಿದ್ದಾರೆ.

Share This Article