ಅವಳಿ ಮಕ್ಕಳ ಹುಟ್ಟುಹಬ್ಬಕ್ಕೆ ಆದಿಚುಂಚನಗಿರಿ ಮಠಕ್ಕೆ ಅಮೂಲ್ಯ ದಂಪತಿ ಭೇಟಿ

Public TV
1 Min Read
amulya

ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಕ್ವೀನ್ ಅಮೂಲ್ಯ (Actress Amulya) ಅವರು ಅವಳಿ ಮಕ್ಕಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಆದಿಚುಂಚನಗಿರಿ ಮಠಕ್ಕೆ ಅವಳಿ ಮಕ್ಕಳೊಂದಿಗೆ ಅಮೂಲ್ಯ ದಂಪತಿ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

amulya

ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಮದುವೆ, ಸಂಸಾರ, ಅವಳಿ ಮಕ್ಕಳ ಪಾಲನೆ ಅಂತಾ ಬ್ಯುಸಿಯಾಗಿದ್ದಾರೆ. ಮದುವೆಯಾದ ಮೇಲೆ ಚಿತ್ರರಂಗಕ್ಕೆ ಬೈ ಹೇಳಿ, ವೈಯಕ್ತಿಕ ಬದುಕಿನತ್ತ ಗಮನ ಕೊಡುತ್ತಿದ್ದಾರೆ.

amulya 1

ಅಮೂಲ್ಯ – ಜಗದೀಶ್ ಮುದ್ದು ಮಕ್ಕಳಾದ ಅಥರ್ವ್ ಮತ್ತು ಅಧವ್ ಹುಟ್ಟುಹಬ್ಬಕ್ಕೆ ಆದಿಚುಂಚನಗಿರಿ ಮಠಕ್ಕೆ ಅಮೂಲ್ಯ ಕುಟುಂಬ ಭೇಟಿ ನೀಡಿ ನಿರ್ಮಲಾನಂದ ಸ್ವಾಮಿ ಅವರ ಆಶೀರ್ವಾದ ಪಡೆದಿದ್ದಾರೆ.

2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಹಸೆಮಣೆ ಏರಿದರು. 5 ವರ್ಷಗಳ ನಂತರ ಅವಳಿ ಮಕ್ಕಳನ್ನ ಈ ಜೋಡಿ ಬರಮಾಡಿಕೊಂಡರು. ಇದೀಗ ತಾವು ಮದುವೆಯಾದ ಸ್ಥಳಕ್ಕೆ ಆದಿಚುಂಚನಗಿರಿ ಭೇಟಿ ಕೊಡುವ ಮೂಲಕ ಅವಳಿ ಮಕ್ಕಳ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *