ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟಿ ಅಮೂಲ್ಯಾರಿಗೆ ಕಂಕಣ ಬಲ ಕೂಡಿಬಂದಿದೆ. ಗುರು ಹಿರಿಯರ ಒಪ್ಪಿಗೆಯಂತೆ ಅಮೂಲ್ಯ ಜಗದೀಶ್ ಕೈ ಹಿಡಿಯೋಕೆ ನಿರ್ಧರಿಸಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿ ಇವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.
Advertisement
ಇಂದು ಸಂಜೆ 6 ಗಂಟೆಗೆ ನಗರದ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ನಟಿ ಅಮೂಲ್ಯ ಜಗದೀಶ್ ಕೈಗೆ ಉಂಗುರ ತೊಡಿಸಲಿದ್ದಾರೆ. ಗುರು ಹಿರಿಯರ ಒಪ್ಪಿಗೆಯಂತೆ ನಿಶ್ಚಯವಾದ ಈ ಮದುವೆಗೆ ಕಳೆದ ವಾರ ಹೆಣ್ಣು ನೋಡುವ ಶಾಸ್ತ್ರ ಮಾಡಲಾಗಿತ್ತು. ಇದೀಗ ನಿಶ್ಚಿತಾರ್ಥ ಸಮಾರಂಭ ನಡೆಸಿ ಶೀಘ್ರದಲ್ಲೇ ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗುತ್ತೆ ಅನ್ನೋದನ್ನ ಕುಟುಂಬದ ಮೂಲಗಳು ತಿಳಿಸಿವೆ.
Advertisement
ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು
Advertisement
ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಜರತಾರಿ ಸೀರೆಯುಡುವ ಅಮೂಲ್ಯ, ಜಗದೀಶ್ ಕೈಗೆ ಸಾಲಿಟೇರ್ ರಿಂಗ್ ತೊಡಿಸಲಿದ್ದಾರಂತೆ. ಅತ್ತ ಜಗದೀಶ್ ಅಮೂಲ್ಯಾರಿಗೆ ಡೈಮಂಡ್ ರಿಂಗ್ ತೊಡಿಸಲಿದ್ದಾರೆ.
Advertisement
ಈ ವಿವಾಹ ನಿಶ್ಚಯ ಸಮಾರಂಭಕ್ಕೆ ಸಿನಿಮಾ ಹಾಗೂ ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಅಮೂಲ್ಯ ಕೈ ಹಿಡಿಯಲಿರುವ ಜಗದೀಶ್ ಮಾಜಿ ಕಾರ್ಪೋರೇಟರ್ ಮಗ. ಲಂಡನ್‍ನಲ್ಲಿ ಎಂಬಿಎ ಮಾಡಿದ್ದು ಬೆಂಗಳೂರಿನ ಆರ್‍ಆರ್ ನಗರ ನಿವಾಸಿ. ಬಹು ಬೇಡಿಕೆಯಲ್ಲಿರುವಾಗಲೇ ಹಸೆಮಣೆ ಏರೋಕೆ ರೆಡಿಯಾಗಿರೋ ಅಮೂಲ್ಯಾರ ಮದುವೆ ದಿನಾಂಕ ಶೀಘ್ರದಲ್ಲೇ ಹೊರಬೀಳಲಿದೆ.
ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ