ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ‘ಕುಲವಧು’ ಧಾರಾವಾಹಿಯ ವಚನಾ ಖ್ಯಾತಿಯ ಅಮೃತಾ ರೀಲ್ ಹುಡುಗ ಜೊತೆ ರಿಯಲ್ ಆಗಿ ಮದುವೆಯಾಗಿದ್ದಾರೆ.
ನಟಿ ಅಮೃತಾ ತಮ್ಮ ಬಹುದಿನಗಳ ಗೆಳೆಯ ಹಾಗೂ ಕಿರುತೆರೆ ನಟ ರಘು ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ಮೇ 12 ಮತ್ತು 13 ರಂದು ಅಂದರೆ ಭಾನುವಾರ ಮತ್ತು ಸೋಮವಾರ ಅದ್ಧೂರಿಯಾಗಿ ನಡೆದಿದೆ. ಇದನ್ನೂ ಓದಿ: ರೀಲ್ ಹುಡ್ಗನ ಜೊತೆಗೆ ರಿಯಲ್ ಆಗಿ ಸಪ್ತಪದಿ ತುಳಿಯಲಿದ್ದಾರೆ ಕುಲವಧು ಖ್ಯಾತಿಯ ವಚನಾ
ಭಾನುವಾರ ರಂದು ಅಮೃತಾ ಮತ್ತು ರಘು ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಕಿರುತೆರೆ ನಟ-ನಟಿಯರು, ಆಪ್ತರು ಮತ್ತು ಸ್ನೇಹಿತರು ಆರತಕ್ಷತೆಗೆ ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಆರತಕ್ಷತೆಯಲ್ಲಿ ಅಮೃತಾ ನೀಲಿ ಬಣ್ಣದ ಗೌನ್ ಧರಿಸಿದ್ದು, ರಘು ಬಿಳಿ ಬಣ್ಣದ ಕುರ್ತಾ ಧರಿಸಿದ್ದರು. ಇಬ್ಬರು ಮುದ್ದಾಗಿ ಕಾಣಿಸುತ್ತಿದ್ದರು.
ಸೋಮವಾರ ಗುರುಹಿರಿಯರ ನಿಶ್ಚಯಿಸಿದ್ದ ಮುಹೂರ್ತದಲ್ಲಿ ಅಮೃತಾ-ರಘು ಬ್ರಾಹ್ಮಿಣ್ ಮತ್ತು ಗೌಡರ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ರಘು ಮತ್ತು ಅಮೃತಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಈ ಹಿಂದೆ ಒಟ್ಟಿಗೆ `ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆ ಗೆದ್ದಿದ್ದರು. ಜೋಡಿ ಐಶ್ವರ್ಯ ಮತ್ತು ರಂಗೇಗೌಡ ಪಾತ್ರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರಿಗೆ `ಬೆಸ್ಟ್ ಜೋಡಿ’ ಅವಾರ್ಡ್ ಕೂಡ ಬಂದಿತ್ತು.