ಕಿರುತೆರೆ ನಟಿ ಅಮೃತಾ ನಾಯ್ಡು (Amrutha Naidu) ಅವರು ನಟನೆಯಿಂದ ದೂರವಿದ್ದಾರೆ. ಮುದ್ದು ಮಗಳು ಸಮನ್ವಿ (Samanvi) ಸಾವಿನ ನೋವಿನಲ್ಲಿದ್ದ ಅಮೃತಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗನ ಆಗಮನ ಖುಷಿ ಕೊಟ್ಟಿದೆ. ಕೆಲ ತಿಂಗಳುಗಳ ಹಿಂದೆ ಮಗನಿಗೆ ಅಮೃತಾ ಅವರು ಜನ್ಮ ನೀಡಿದ್ದರು. ಈಗ ಮೊದಲ ಬಾರಿಗೆ ಮಗನ ಫೋಟೋವನ್ನು ನಟಿ ರಿವೀಲ್ ಮಾಡಿದ್ದಾರೆ.
25ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ನಟಿಸಿರುವ ಅಮೃತಾ ನಾಯ್ಡು, ಗಂಗೋತ್ರಿ, ಸತ್ಯ, ಅಮೃತವರ್ಷಿಣಿ, ಪುಣ್ಯಕೋಟಿ (Punyakoti) ಸೇರಿದಂತೆ ಹಲವು ಹಿಟ್ ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಮೃತಾ ಅವರು ಬಣ್ಣ ಹಚ್ಚಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ (Nanamma Super Star) ರಿಯಾಲಿಟಿ ಶೋನಲ್ಲಿ ಮುದ್ದು ಮಗಳು ಸಮನ್ವಿ ಜೊತೆ ಅಮೃತಾ ಭಾಗವಹಿಸಿದ್ದರು.
2022ರಲ್ಲಿ ಕಾರು ಅಪಘಾತದಲ್ಲಿ ಮಗಳು ಸಮನ್ವಿಯನ್ನ ಅಮೃತಾ-ರೂಪೇಶ್ ದಂಪತಿ ಕಳೆದುಕೊಂಡರು. ಸಮನ್ವಿ ಸಾವಿನ ನಂತರ ಅಮೃತಾ ಕುಟುಂಬ ತುಂಬಾ ನೊಂದಿದ್ದರು. ಸಮನ್ವಿ ಸಾವಿನ ಸಮಯದಲ್ಲಿ ಅಮೃತಾ ಅವರಿಗೆ ಆಗ 5 ತಿಂಗಳ ಗರ್ಭಿಣಿಯಾಗಿದ್ದರು. ಹಾಗಾಗಿ ಮಗಳ ಸಾವಿನ ಆಘಾತದಿಂದ ಹೊರಬರಲು ಸಾಕಷ್ಟು ಸಮಯ ಬೇಕಾಗಿತ್ತು. ಅಮೃತಾ- ಸಮನ್ವಿ ಬೈಕ್‌ನಲ್ಲಿ ಹೋಗುವಾಗ ಲಾರಿಯೊಂದು ಬಂದು ಡಿಕ್ಕಿ ಹೊಡೆದಿತ್ತು. ಆಗ ಸಮನ್ವಿ ತಲೆಗೆ ಗಂಭೀರ ಪೆಟ್ಟಾಗಿ ಸಾವನ್ನಪ್ಪಿದ್ದಳು. ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ
ಬೇಬಿ ಬಂಪ್ ಫೋಟೋಶೂಟ್ ಮೂಲಕ ನಟಿ ಕೆಲ ತಿಂಗಳುಗಳ ಹಿಂದೆ ಹೊಸ ಅತಿಥಿಯ ಆಗಮನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಬಳಿಕ ಗಂಡು ಮಗು ಜನಿಸಿರೋದಾಗಿ ಸೋಷಿಯಲ್ ಮೀಡಿಯಾ ಮೂಲಕ ಗುಡ್ ನ್ಯೂಸ್ ತಿಳಿಸಿದ್ದರು. ಈಗ ಮೊದಲ ಬಾರಿಗೆ ಮಗನ ಫೋಟೋವನ್ನ ಅಮೃತಾ ಹಂಚಿಕೊಂಡಿದ್ದಾರೆ. ಆದರೆ ಮಗನ ಮುಖ ಕಾಣದೇ ನಟಿ ಮರೆಮಾಚಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]