‘ಸುಂದರಿ’ (Sundari) ಸೀರಿಯಲ್ ಮೂಲಕ ಕಿರುತೆರೆಗೆ ಲಗ್ಗೆಯಿಟ್ಟ ಚೆಲುವೆ ಅಮೂಲ್ಯ ಗೌಡ (Amoolya Gowda) ಇದೀಗ ಸ್ಯಾಂಡಲ್‌ವುಡ್‌ನಲ್ಲಿ (Sandalwood) ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ‘ಕುರುಡು ಕಾಂಚಣ’ (Kurudu Kanchana) ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
2016 ‘ಸುಂದರಿ’ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಅಮೂಲ್ಯ ಅವರು ಅಪರಂಜಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ ಸೀರಿಯಲ್ ಗಳ ಮೂಲಕ ನಟಿ ಗಮನ ಸೆಳೆದರು. 2016ರ `Princess Karnataka’ ವಿನ್ನರ್ ಕೂಡ ಆಗಿದ್ದಾರೆ. 2020ರಲ್ಲಿ ಶಮಂತ್ ಗೌಡ (Shamanth Gowda) ಜೊತೆ ‘ಮರೆಯಲಾರೆ’ (Mareyalaare) ಎಂಬ ಬ್ರೇಕಪ್ ಸಾಂಗ್ ನಲ್ಲಿ ನಟಿಸಿದ್ದರು. ಸಾಕಷ್ಟು ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಕೊಂಡಿದ್ದಾರೆ.
‘ಒನ್ ವೇ’ ಚಿತ್ರದ ನಟ ಕಿರಣ್ ರಾಜ್‌ಗೆ ‘ಕುರುಡು ಕಾಂಚಾಣ’ (Kurudu Kanchana) ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಮೂಲ್ಯ ನಟಿಸಿದ್ದಾರೆ. ಜೆನ್ನಿ ಎನ್ನುವ ಪಾತ್ರಕ್ಕೆ ಅಮೂಲ್ಯ (Amoolya Gowda) ಜೀವತುಂಬಿದ್ದಾರೆ. ನಟನೆಗೆ ಒತ್ತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಪ್ರದೀಪ್ ವರ್ಮಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ. ಇದನ್ನೂ ಓದಿ: Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?
‘ಕುರುಡು ಕಾಂಚಾಣ’ ಎಂಬ ಭಿನ್ನ ಕಥೆಯಲ್ಲಿ ನಟಿಸಿರುವ ಅಮೂಲ್ಯ, ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಸದ್ಯದಲ್ಲಿಯೇ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಸಾಕಷ್ಟು ಕಥೆಗಳನ್ನ ಬರೆದಿಟ್ಟುಕೊಂಡಿರುವ ಅಮೂಲ್ಯ, ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗಿ ಕೂಡ ಬರಲಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ತಯಾರಿಯನ್ನ ನಡೆಸುತ್ತಿದ್ದಾರೆ.
ಕಿರುತೆರೆಯಲ್ಲಿ ಅಭಿಮಾನಿಗಳ ಗಮನ ಸೆಳೆದಿರುವ ನಟಿ ಅಮೂಲ್ಯ, ಬೆಳ್ಳಿತೆರೆಯಲ್ಲಿ ಕೂಡ ಬೆಳಗಲಿ ಎಂಬುದೇ ಅಭಿಮಾನಿಗಳ ಆಶಯ.