ಹೈದರಾಬಾದ್: ನಟಿ ಅಮಲಾ ಪೌಲ್ ತಮಿಳಿನ ‘ಅಡೈ’ ಸಿನಿಮಾದ ಟೀಸರ್‌ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ದೃಶ್ಯದಲ್ಲೂ ಸಂಪೂರ್ಣವಾಗಿ ನಗ್ನವಾಗಿ ಕಾಣಿಸಿಕೊಂಡಿದ್ದು, ಆ ವಿಡಿಯೋವನ್ನು ಸ್ವತಃ ಅಮಲಾ ಅವರೇ ಶೇರ್ ಮಾಡಿದ್ದಾರೆ.
ನಟಿ ಅಮಲಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬೆತ್ತಲಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಮಲಾ ನಗ್ನವಾಗಿದ್ದು, ಅದನ್ನು ಕನ್ನಡಿಯಲ್ಲಿ ನೋಡಿಕೊಂಡಿದ್ದಾರೆ. ಬಳಿಕ ಮೈ ಮೇಲೆ ಬಟ್ಟೆ ಇಲ್ಲದೆ ಕನ್ನಡಿಯನ್ನು ಹಿಡಿದುಕೊಂಡು ಬಂದಿರುವ ದೃಶ್ಯ ಇದಾಗಿದೆ. ಈ ವಿಡಿಯೋ ಸುಮಾರು 2 ನಿಮಿಷ 31 ಸೆಕೆಂಡ್ ಇದ್ದು, ಈಗಾಗಲೇ ಬಿಡುಗಡೆಯಾದ ಒಂದೇ ದಿನದಲ್ಲಿ ಯೂಟ್ಯೂಬ್‍ನಲ್ಲಿ 24 ಲಕ್ಷಕ್ಕಿಂದ ಅಧಿಕ ವೀವ್ಸ್ ಕಂಡಿದೆ. ಇದನ್ನೂ ಓದಿ: ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿದ್ದೇಕೆ – ಸ್ಪಷ್ಟನೆ ಕೊಟ್ಟ ಅಮಲಾ ಪೌಲ್
ಅಮಲಾ ಪೌಲ್ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಜೊತೆಗೆ “ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಓದುವಾಗ ಈ ದೃಶ್ಯ ಅಷ್ಟೊಂದು ಆಕರ್ಷಣೆ ಎನಿಸಲಿಲ್ಲ. ಆದರೆ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ನನ್ನ ಮನಸ್ಸಿಗೆ ಸಂತಸವಾಗಿತ್ತು” ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಅಮಲಾ ಪೌಲ್ ನಟಿಸಿರುವ ‘ಅಡೈ’ ಸಿನಿಮಾ ಟೀಸರ್ ಬಿಡುಗಡೆಯಾಗಿತ್ತು. ಆಗ ಟೀಸರ್‌ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದರಿಂದ ಅಮಲಾ ಪೌಲ್ ನಗ್ನತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ತಮಿಳಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅವರು ದೂರು ದಾಖಲಿಸಿದ್ದರು.
A scene that intimidated me on paper but blew my mind while filming! More power to #teamawesome ????@vijaykarthik @sampathdft @pradeepvijay editor Shafiq and hero @MrRathna ????https://t.co/5F7vg19AEN#Aadai #Aame
— Amala Paul ⭐️ (@Amala_ams) July 21, 2019