ಬೆಂಗಳೂರು: ನಟ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾದ ನಾಯಕಿ ಅಮಲಾ ಪೌಲ್ ಅವರು ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ.
ನಟ ಕಿಚ್ಚ ಸುದೀಪ್ ಜೊತೆ ಅಭಿನಯಿಸಿದ್ದ ಬಾಲಿವುಡ್ ನಟಿ ಸಮಂತಾ, ಪ್ರಿಯಾಮಣಿ ಮತ್ತು ಭಾವನಾ ಅವರು ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಹೆಬ್ಬುಲಿ ಸಿನಿಮಾದಲ್ಲಿ ಕಿಚ್ಚನಿಗೆ ಜೋಡಿಯಾಗಿದ್ದ ನಟಿ ಅಮಲಾ ಪೌಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.
ನಟಿ ಅಮಲಾ ಪೌಲ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಈಗ ಎರಡನೇ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ. 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಜೊತೆ ಅಮಲಾ ಹಸೆಮಣೆ ಏರಿದ್ದರು. ಆದರೆ ಮೂರು ವರ್ಷ ಸಾಂಸಾರಿಕ ಜೀವನ ನಡೆಸಿದ್ದು, ಬಳಿಕ ಇಬ್ಬರ ದೂರವಾಗಿದ್ದರು.
ನಟಿ ಅಮಲಾ ಪೌಲ್ ಒಂದು ವರ್ಷದಿಂದ ಸಿನಿಮಾ ಮಾಡಿಕೊಂಡು ಒಂಟಿಯಾಗಿದ್ದಾರೆ. ಆದ್ದರಿಂದ ಮನೆಯವರಿಗೆ ಮದುವೆ ಮಾಡಲು ಹುಡುಗನನ್ನ ಹುಡುಕುವುದಕ್ಕೆ ಶುರು ಮಾಡಿದ್ದಾರೆ. ನಟಿ ಅಮಲಾ ಪೌಲ್ ಎರಡನೇ ಮದುವೆ ಅರೇಂಜ್ ಮ್ಯಾರೇಜ್ ಆಗಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊದಲು ನಿರ್ದೇಶಕ ಎ.ಎಲ್ ವಿಜಯ್ ರನ್ನ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಸಂಸಾರ ಜೀವನ ಅಷ್ಟು ಚೆನ್ನಾಗಿರಲಿಲ್ಲ. ಹೀಗಾಗಿ ಎರಡನೇ ಮದುವೆಯ ಸಂಪೂರ್ಣ ನಿರ್ಧಾರವನ್ನ ತಂದೆ-ತಾಯಿಯ ಹೆಗಲ ಮೇಲೆ ಹಾಕಿದ್ದಾರಂತೆ. ನೀವು ಹುಡುಕಿದ ಹುಡುಗನ ನಾನು ಮದುವೆಯಾಗುತ್ತೇನೆ ಅಂತ ಅಮಲಾ ಪೌಲ್ ತಮ್ಮ ಪೋಷಕರಿಗೆ ಮಾತು ಕೊಟ್ಟಿದ್ದಾರಂತೆ. ಹೀಗಾಗಿ ಮಗಳ ಬಾಳನ್ನ ಹಸನಾಗಿಸಲು ವರನಿಗಾಗಿ ಹುಡುಕಾಟ ಶುರುಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv